News Karnataka Kannada
Sunday, April 14 2024
Cricket
ಬೆಂಗಳೂರು ನಗರ

ಡಿಜಿ, ಕೆಜಿ ಹಳ್ಳಿ ಗಲಭೆಗೆ ಕಾಂಗ್ರೆಸ್, ಎಸ್ ಡಿಪಿಐ ನೇರ ಹೊಣೆ: ನಳಿನ್ ಕುಮಾರ್

Photo Credit :

ಡಿಜಿ, ಕೆಜಿ ಹಳ್ಳಿ ಗಲಭೆಗೆ ಕಾಂಗ್ರೆಸ್, ಎಸ್ ಡಿಪಿಐ ನೇರ ಹೊಣೆ: ನಳಿನ್ ಕುಮಾರ್

ಬೆಂಗಳೂರು: ಆಗಸ್ಟ್ 11ರಂದು ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದಿರುವಂತಹ ಘಟನೆಗೆ ಕಾಂಗ್ರೆಸ್ ಮತ್ತು ಎಸ್ ಡಿಪಿಐ ನೇರ ಹೊಣೆಯಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಮತ್ತು ಸಂಸದ ಪಿಸಿ ಮೋಹನ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ವರದಿ ನೀಡಿರುವರು.

ಇದು ಆಕಸ್ಮಿಕವಗಿ ಅಥವಾ ಹಠಾತ್ ಆಗಿ ನಡೆದಿರುವಂತಹ ಗಲಭೆಯಲ್ಲ ಮತ್ತು ಇದನ್ನು ಪೂರ್ವಯೋಜಿತವಾಗಿಯೇ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗಲಭೆಗೆ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ನೇರ ಕಾರಣ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಆರೋಪಿಸಿದರು. ಈ ಎರಡು ಪಕ್ಷಗಳು ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ತಾಲಿಬಾನಿನಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎರಡು ಪಕ್ಷಗಳು ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ಮಾಡಿದರು ಮತ್ತು ಅವರ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ ಎಂದು ನಳಿನ್ ಆರೋಪಿಸಿದ್ದಾರೆ.

ಈ ವರದಿಯಲ್ಲಿ ನಳಿನ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು