News Karnataka Kannada
Monday, April 22 2024
Cricket
ಬೆಂಗಳೂರು ನಗರ

ಜಾತಿ, ವರ್ಗಗಳ ಹಂಗಿಲ್ಲದೆ ಸರ್ವರಿಗೂ ಗುಣಮಟ್ಟದ ಶಿಕ್ಷಣ ಸಲ್ಲಬೇಕು: ಅಶ್ವತ್ಥನಾರಾಯಣ

Ashwath
Photo Credit :
ಬೆಂಗಳೂರು ನಗರ : ಬಯಲು ಸೀಮೆಯಲ್ಲಿ ಕರೀಗೌಡರಂತಹ ಪ್ರತಿಭೆಯಲ್ಲಿ ಅರಳಿರುವುದು ಸಾಮಾನ್ಯ ವಿಚಾರವಲ್ಲ.ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವಲ್ಲಿ ಕರೀಗೌಡರ ಶ್ರಮ ಶ್ಲಾಘನೀಯ ಎಂಬುದಾಗಿ ಕರ್ನಾಟಕ ಸರ್ಕಾರದ ಐಟಿ, ಬಿಟಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.

ಬೆಂಗಳೂರಿನ ಸಂಚಲನ ಸಂಸ್ಕೃತಿ ವೇದಿಕೆ ಮತ್ತು ಗೋವಿಂದರಾಜನಗರದ ಕಿರಂ ಪ್ರಕಾಶನದ ಜಂಟಿ ಆಶ್ರಯದಲ್ಲಿ ಲೇಖಕ ಡಾ.ಕರೀಗೌಡ ಬೀಚನಹಳ್ಳಿ ಅವರ ಬದುಕು ಕೃತಿಗಳ ವಿಮರ್ಶಾ ಗ್ರಂಥ ‘ಸಾಂಗತ್ಯ’ ಕೃತಿಯ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವು 2022 ಎಪ್ರಿಲ್ 05 ಮಂಗಳವಾರದಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಪ್ರೊ. ಕೆ. ವೆಂಕಟಗಿರಿಗೌಡ ಸ್ಮಾರಕ ಭವನದ ಆಶ್ರಯದಲ್ಲಿ ನಡೆದಿದ್ದು,ಈ ವೇಳೆ ಅವರ ಮಾತನಾಡಿದರು.

ಭವಿಷ್ಯದ ಪ್ರಜೆಗಳನ್ನ ಸಿದ್ಧಪಡಿಸುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಸರ್ಕಾರ, ಕುಗ್ರಾಮದಲ್ಲೂ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕೆಂಬ ಉದ್ದೇಶದಿಂದ ಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಸರ್ಕಾರದ ಈ ಉದ್ದೇಶಕ್ಕೆ ಎಲ್ಲರೂ ನೆರವಾಗಬೇಕು. ಸರ್ವರಿಗೂ ಶಿಕ್ಷಣ ಸಲ್ಲಬೇಕು ಎಂಬುದಾಗಿ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ  ಡಾ. ಕೆ. ಮರುಳಸಿದ್ಧಪ್ಪ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭಾರತೀಯ ಕಥಾ ಪರಂಪರೆಯಲ್ಲಿ ಕನ್ನಡದ ಜೊತೆಗೆ ಸರಿಸಮವಾಗಿ ನಿಲ್ಲಬಲ್ಲವು ಬೆರಳೆಣಿಕೆಯಷ್ಟಿವೆ. ಇಂತಹ ಕಥಾ ಪರಂಪರೆಯ ಭಾಗವಾಗಿ ಅದನ್ನು ಮುಂದುವರಿಸಿಕೊಂಡು ಬಂದಿರುವವರು ಕರೀಗೌಡರು ಎನ್ನಲು ಹೆಮ್ಮೆಯಾಗುತ್ತದೆ. ಕನ್ನಡ ಕತೆಗಳನ್ನು ಸೃಜನಾಶೀಲವಾಗಿ ಸಮೃದ್ಧಗೊಳಿಸುವುದರ ಜೊತೆಗೆ ಕನ್ನಡ ಕತಾ ಪರಂಪರೆಯ ವ್ಯಾಖ್ಯಾನವನ್ನು ವಿಮರ್ಶೆಯ ಜೊತೆ ಜೊತೆಗೆ ನಡೆಸಿಕೊಂಡು ಬಂದವರು ಕರೀಗೌಡರು ಎಂಬುದಾಗಿ ಅವರು ನುಡಿದರು.

‘ಸಾಂಗತ್ಯ’ ಗ್ರಂಥ ಸಂಪಾದಕರು ಅಗ್ರಹರ ಕೃಷ್ಣಮೂರ್ತಿ ಮಾತನಾಡಿ, ಸಾಂಗತ್ಯ ಎಂಬ ಪದ ಇಂದಿನ ದಿನದಲ್ಲಿ ಅಗತ್ಯವಾಗಿ ಇರಬೇಕಿಗಿರುವ ಕೂಡು ಬಾಳುವಿಕೆಯನ್ನುಸೂಚಿಸುವ ಪದ, ಸೌಹಾರ್ದತೆಯನ್ನು ಸಾರುವ ಪದವೂ ಹೌದು. ಸಾಂಗತ್ಯದ ಪರಿಕಲ್ಪನೆಯನ್ನು ಕರೀಗೌಡರು ಅವರ ಅನೇಕ ಕತೆ, ಲೇಖನಗಳ ಮೂಲಕ ಕಳೆದ 40 ವರ್ಷಗಳ ಹಿಂದೆಯೇ ತಿಳಿಸಿದ್ದಾರೆ. ಇಂದಿಗೂ ಸೌಹಾರ್ದತೆಯ ಬಗೆಗಿನ ದಿಟ್ಟ ನಿಲುವು ಹೊಂದಿರುವ ಕರೀಗೌಡರ ಬಗೆಗಿನ ಕೃತಿಗೆ ಇದಕ್ಕಿಂತ ಉತ್ತಮ ಶೀರ್ಷಿಕೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದರು.

ಡಾ.ಕರೀಗೌಡ ಬೀಚನಹಳ್ಳಿ ಅವರು ಮಾತನಾಡಿ, ಇಂದಿನ ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರು ಹಾಗೂ ಲೇಖಕರ ಪಾತ್ರ ಪ್ರಮುಖವಾಗಿದೆ. ಅವೆರಡು ಪಾತ್ರಗಳು ಭಿನ್ನವೆನ್ನಿಸಿಲ್ಲ.  ಸಮಾಜದಲ್ಲಿ ನಾಗರಿಕನನ್ನು ರೂಪಿಸುವಲ್ಲ ಇಬ್ಬರ ಪಾತ್ರವೂ ಮುಖ್ಯ ಎಂಬುದಾಗಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಡಾ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಸೃಜನಶೀಲ ವ್ಯಕ್ತಿ ಕೃತಿ ರಚನೆ ಮಾಡುವಲ್ಲಿ ವಯಸ್ಸಿನ ಮಿತಿ ಬರುವುದಿಲ್ಲ ಎಂಬುದಕ್ಕೆ ಕರೀಗೌಡ ಅವರು ಸಾಕ್ಷಿ.ಕರೀಗೌಡರು ಮೌನದಲ್ಲಿ ಕ್ರಾಂತಿ ಮಾಡುವವರು ಎಂಬುದಾಗಿ ಕರೀಗೌಡರೊಂದಿಗಿನ ವೃತ್ತಿಯ ದಿನಗಳನ್ನ ನೆನಪಿಸಿಕೊಂಡರು.

https://youtu.be/9jjbSFKnVzE  ಲೈವ್ ಲಿಂಕ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು