News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ಜಮೀರ್ ಅಹಮದ್, ಡಿಕೆಶಿ ಅವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಲಿ: ಕೆ ಎಸ್ ಈಶ್ವರಪ್ಪ

Photo Credit :

ಜಮೀರ್ ಅಹಮದ್, ಡಿಕೆಶಿ ಅವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಲಿ: ಕೆ ಎಸ್ ಈಶ್ವರಪ್ಪ

ಬೆಂಗಳೂರು: ಜಮೀರ್ ಅಹಮದ್ ಆಗೊಂದು-ಈಗೊಂದು ಬಾರಿ ಮುಸಲ್ಮಾನ್ ನಾಯಕ ಆಗೋಕೆ ಹೊರಟು ಬಿಡ್ತಾರೆ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಆಗಿದ್ದಾಗ ಇವನೇ ಲೀಡರ್ ಶಿಫ್ ವಹಿಸಿಕೊಂಡಿದ್ದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಜಮೀರ್ ಅಹಮದ್ ಹಾಗೂ ಡಿಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.

ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಆಗಿದ್ದಾಗ ಇವನೇ ಲೀಡರ್ ಶಿಫ್ ವಹಿಸಿಕೊಂಡಿದ್ದು ಎಂದು ಅವರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರೇ ನೇರವಾಗಿ ಆರೋಪ ಮಾಡಿದ್ದರು. ನಾನು ಆವರ ಬಗ್ಗೆ ಆರೋಪ ಮಾಡಿಲ್ಲ. ಅವರ ಶಾಸಕ ಮಾಡಿದ ಆರೋಪಕ್ಕೆ ಮೊದಲು ಉತ್ತರ ಕೊಡಲಿ. ಜಮೀರ್ ಅಹಮದ್ ಅವರೇ ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದು ವಿರೋಧ ಇದೆ ಎಂದು ತೀವ್ರ ವಾಕ್ ಪ್ರಹಾರ ನಡೆಸಿದರು.

ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು, ನಿಮಗೆ ಬೇರೆ ಉದ್ಯೋಗವೇ ಇಲ್ಲ. ತೇಜಸ್ವಿ ಸೂರ್ಯ ಅವರ ಬಗ್ಗೆ ಜಮೀರ್ ಆಡಿರುವ ಮಾತುಗಳನ್ನು ಕೇಳಿದೆ. ನನಗೆ ಅಂತಹ ಪದಗಳನ್ನು ಬಳಸುವುದಕ್ಕೆ ಇಷ್ಟವಾಗಲ್ಲ. ಡಿಕೆಶಿ, ಜಮೀರ್ ಅವರೇ ಮುಸಲ್ಮಾನರ ಪರವಾಗಿಯೇ ಇರಿ. ಹಿಂದೂಗಳು ನಿಮಗೆ ಓಟ್ ಹಾಕಿದ್ದಾರೆನ್ನೋದು ಮರೀಬೇಡಿ. ಹಿಂದುಗಳ ಅನ್ನವನ್ನು ತಿಂದಿದ್ದೀರಾ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದರು.

ತೇಜಸ್ವಿ ಸೂರ್ಯ ಬಗ್ಗೆ, ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀರಾ. ನೀವು ಮಾತನಾಡಿ ಅದಕ್ಕಿಂತ ಕೆಟ್ಟ ಪದಗಳು ನನಗೂ ಬರುತ್ತದೆ. ಆದರೆ ಈ ಸಂದರ್ಭದಲ್ಲಿ ನಾನು ಮಾತನಾಡಲ್ಲ. ಜಮೀರ್ ಅಹಮದ್, ಡಿಕೆಶಿ ಅವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಲಿ ಎಂದು ಎಚ್ಚರಿಕೆಯನ್ನೂ ಸಚಿವ ಈಶ್ವರಪ್ಪ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು