News Karnataka Kannada
Sunday, April 14 2024
Cricket
ಬೆಂಗಳೂರು ನಗರ

ಗೃಹ ಸಚಿವರಿಗೆ ಹೆಂಡ ಕುಡಿಯುವ, ಗಾಂಜಾ ಹೊಡೆಯುವ ಅಭ್ಯಾಸ ಇರಬೇಕು; ಬಿ.ಕೆ.ಹರಿಪ್ರಸಾದ್

Bk Hariprasad
Photo Credit :

ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿವಾದಾತ್ಮಕ ಟೀಕೆ ಮಾಡಿದ್ದಾರೆ.

ಗೃಹ ಸಚಿವ ಅರೆ ಪ್ರಜ್ಞೆ ಜ್ಙಾನೇಂದ್ರ..ಅವರಿಗೆ ಹೆಂಡ ಕುಡಿಯುವ ಅಥವಾ ಗಾಂಜಾ ಹೊಡೆಯುವ ಅಭ್ಯಾಸ ಇರಬೇಕು. ಅದಕ್ಕೆ ಏನೇನೋ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.

ಇಂತಹವರೆಲ್ಲ ನಮ್ಮ ಗೃಹ ಸಚಿವರು ಆಗಿರುವುದು ದೌರ್ಭಾಗ್ಯ.ಹಿಂದೂ ಬೇರೆ ಹಿಂದುತ್ವ ಬೇರೆ. ಹಿಂದುತ್ವ ಅಂದರೆ ಹಿಂಸೆ ಮತ್ತು ದೌರ್ಜನ್ಯ ಅನ್ನುವುದನ್ನ ತಿಳಿದುಕೊಳ್ಳಿ ಎಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆ ವೇಳೆ ಹೇಳಿದರು.

ಸ್ವಾಮಿ ವಿವೇಕಾನಂದ , ಇಂದಿರಾಗಾಂಧಿ ಇವರೆಲ್ಲ‌ ಹಿಂದೂ ಆಗಿದ್ದರು.ಸಹಿಷ್ಣು ತೆಯೇ ಹಿಂದೂ ಧರ್ಮ .ಆದರೆ ಗೋಲ್ವಾಲ್ಕರ್ ಆಗಲಿ ಸಾವರ್ಕರ್ ಆಗಲಿ ಹಿಂದೂ ಧರ್ಮ ಅನುಸರಿಸಿಲ್ಲ ಎಂದು ಟೀಕಿಸಿದರು.

ಧಾರವಾಡದಲ್ಲಿ ಬಡ ವ್ಯಾಪಾರಕ್ಕೆ ಅಡ್ಡಿ ಮಾಡಿದ್ದಾರೆ. ಇದೇ ಮುತಾಲಿಕ್ ಈದ್ಗಾ ಮೈದಾನ ಗಲಾಟೆ ಮಾಡಿದ್ದರು. ಇದರ ಲಾಭ ಪ್ರಹ್ಲಾದ ಜೋಶಿ ‌ಪಡೆದು ಕೇಂದ್ರ ಮಂತ್ರಿ ಆಗಿದ್ದಾರೆ. ಮುತಾಲಿಕ್ ಗೆ ಯಾವ ಸ್ಥಾನ ಸಿಗಲಿಲ್ಲ.ಬೆಂಕಿ ಹಚ್ಚುವ ಕೆಲಸ ಮಾಡಬೇಡಿ.ಇದೆ ಬಿಜೆಪಿ ನಿಮ್ಮನ್ನು ಜೈಲಿಗೆ ಕಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು