News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಕ್ರೀಡೆಯಲ್ಲಿ ಸೋಲಿನ ಭಯ ಇಲ್ಲದೇ ಗೆಲ್ಲಲೇಬೇಕೆಂದು ಆಡಿ : ಸಿಎಂ ಬೊಮ್ಮಾಯಿ

Khelo India
Photo Credit : G Mohan

ಬೆಂಗಳೂರು : ಗೆಲ್ಲಲೇಬೇಕೆಂಬ ಛಲದೊಂದಿಗೆ ಆಟ ಆಡಿ. ಸೋಲಲೇಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರೀಡಾಪಟುಗಳಿಗೆ ಕರೆ ನೀಡಿದರು

ಇಂದು ಕಂಠೀರವ ಕ್ರೀಡಾಂಗಣದಲ್ಲಿ ಇಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಉದ್ಘಾಟಿಸಿದ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಷ್ಟಮಟ್ಟದಲ್ಲಿ ಯಾವುದೇ ಕ್ರೀಡಾ ಕೂಟ ಇದ್ದರೂ ಪ್ರಥಮ ಆದ್ಯತೆಯನ್ನು ಬೆಂಗಳೂರಿಗೆ ನೀಡಬೇಕು. ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟ ಆಯೋಜಿಸಲು ನಮ್ಮ ಮೂಲಭೂತ ಸೌಕರ್ಯಗಳನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇವೆ.

ಕ್ರೀಡಾಕೂಟ ಆಯೋಜಿಸಲು ಜೈನ್ ಯೂನಿವರ್ಸಿಟಿ ಬಹಳ ದೊಡ್ಡ ಬೆಂಬಲವನ್ನು ನೀಡಿದೆ. ಕ್ರೀಡಾಕೂಟದ ನಂತರ ಮೌಲ್ಯ ಮಾಪನವನ್ನು ಮಾಡಿ ಕ್ರೀಡಾಕೂಟ ಗಳನ್ನು ಆಯೋಜಿಸಲು ಬೆಂಗಳೂರಿಗೆ ಆದ್ಯತೆ ನೀಡಬೇಕು ಎಂದರು.

ಗೆಲ್ಲಲೇಬೇಕೆಂದು ಆಟವಾಡಿ
ಕ್ರೀಡಾ ಪಟುಗಳು ಕ್ರೀಡೆಗಳನ್ನು ಪ್ರಾಮಾಣಿಕವಾಗಿ ಆಡಬೇಕು. ಸೋಲು, ಗೆಲುವು ಆಟದ ಭಾಗ. ಎರಡನ್ನೂ ಸಮನಾಗಿ ತೆಗೆದುಕೊಂಡು ಕ್ರೀಡಾ ಸ್ಪೂರ್ತಿಯಿಂದ ಮುಂದೆಹೋಗೋಣ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದರೆ ಭಾಗವಹಿಸಲು ಅವಕಾಶ ಸಿಕ್ಕಿದೆ. ಸೋತವರಿಗೆ ಗೆಲ್ಲಲು ಮತ್ತೊಂದು ಅವಕಾಶ ದೊರೆಯುತ್ತದೆ. ಗೆಲ್ಲಲೆಂದೇ ಆಡಿ, ಸೋಲಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು ಕರೆ ನೀಡಿದರು.

ಖೇಲೋ ಇಂಡಿಯಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಬೆಂಗಳೂರು ಇಡೀ ಭಾರದ ದೇಶದಲ್ಲಿಯೇ ಅತ್ಯಂತ ಪ್ರಗತಿಪರವಾಗಿರುವ ರಾಜಧಾನಿ. ಅಂತರರಾಷ್ಟ್ರೀಯ ನಗರ. ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಯೂನಿವರ್ಸಿಟಿ ಕ್ರೀಡಾಕೂಟ ಜರುಗುತ್ತಿದೆ. ಸುಮಾರು 3800 ಕ್ರೀಡಾಪಟುಗಳು 20 ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಜೈನ್ ಕ್ರೀಡಾ ವಿಶ್ವವಿದ್ಯಾಲಯದ ಅವರ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಕ್ರೀಡೆಗೆ ಮೀಸಲಾಗಿರುವ ರಾಷ್ಟ್ರ ಮಟ್ಟದ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಇರುವುದು ನಮ್ಮ ಹೆಮ್ಮೆ ಎಂದರು. ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಆಯೋಜಿಸಲು ಹಗಲಿರುಳು ಶ್ರಮಿಸಿ, ಯಶಸ್ವಿಗೊಳಿಸಲು ಪಣ ತೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು