News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಕೋವಿಶಿಲ್ಡ್‌,ಕೋವ್ಯಾಕ್ಸಿನ್‌ ಲಸಿಕೆ ದರ ಇಳಿಕೆ: ಖಾಸಗಿ ಆಸ್ಪತ್ರೆಯಲ್ಲಿ ₹225ಕ್ಕೆ ಲಭ್ಯ

Vaccination
Photo Credit : IANS

ಬೆಂಗಳೂರು : ದೇಶದಲ್ಲಿ ಕೋವಿಶಿಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ದರ ಇಳಿಕೆಯಾಗಿದ್ದು, ನಾಳೆಯಿಂದ (ಏ.10) ಹೊಸ ದರದಲ್ಲಿ ಲಸಿಕೆ ಲಭ್ಯವಾಗಲಿದೆ.

ಖಾಸಗಿ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟವರು, ಬೂಸ್ಟರ್‌ ಹಾಗೂ ಮುನ್ನೆಚ್ಚರಿಕೆ ಡೋಸ್‌ ಪಡೆಯುವವರು ಇನ್ನು ಮುಂದೆ ಪ್ರತಿ ಡೋಸ್‌ ಕೋವಿಶಿಲ್ಡ್‌ ಲಸಿಕೆಯನ್ನು ₹ 225ಕ್ಕೆ ಪಡೆಯಬಹುದಾಗಿದೆ.

ಹಾಗೇ ಕೋವ್ಯಾಕ್ಸಿನ್‌ ಲಸಿಕೆಯನ್ನು ಕೂಡ ₹ 225ಕ್ಕೆ ಪಡೆಯಬಹುದು. ಖಾಸಗಿ ಲಸಿಕಾ ಕೇಂದ್ರ ಅಥವಾ ಆಸ್ಪತ್ರೆಗಳ ಸೇವಾ ಶುಲ್ಕ ₹150ನ್ನು ಪ್ರತ್ಯೇಕವಾಗಿ ಪಾವತಿಸಬೇಕು.

ದರ ಪರಿಷ್ಕರಣೆಯಿಂದ ಕೋವಿಶೀಲ್ಡ್‌ ಲಸಿಕೆ ₹ 225ಕ್ಕೆ ಲಭ್ಯವಾಗಲಿದೆ. ಈ ಮೊದಲು ಲಸಿಕೆ ₹ 600ಕ್ಕೆ ದೊರೆಯುತ್ತಿತ್ತು. ಅದೇ ರೀತಿ ಕೋವ್ಯಾಕ್ಸಿನ್‌ ಲಸಿಕೆ ಕೂಡ ₹225ಕ್ಕೆ ದೊರೆಯಲಿದೆ. ಇದು ಈ ಮೊದಲು ₹1200ಕ್ಕೆ ಲಭ್ಯವಾಗುತ್ತಿತ್ತು. ಈ ದರ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಲಸಿಕಾ ಕೇಂದ್ರಗಳಿಗೆ ಮಾತ್ರ ಅನ್ವಯವಾಗಲಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಾಗಲಿದೆ.

ಕೋವಿಶೀಲ್ಡ್‌ ಲಸಿಕೆ ತಯಾರಿಸುವ ಸೆರಂ ಕಂಪನಿಯ ಪೂನಾವಾಲ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುವ ಭಾರತ್‌ ಬಯೋಟೆಕ್‌ ಕಂಪನಿಯ ಸುಚಿತ್ರಾ ಅವರು ಟ್ವೀಟ್‌ ಮಾಡಿ ಹೊಸ ದರದ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಜೊತೆ ಹಲವು ಸುತ್ತುಗಳ ಮಾತಕತೆ ನಡೆಸಿದ ಬಳಿಕ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ನಾಳೆಯಿಂದ 18 ವರ್ಷ ಮೇಲ್ಪಟ್ಟವರು, ಬೂಸ್ಟರ್‌ ಡೋಸ್‌ ಪಡೆಯುವವರು ಖಾಸಗಿ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಹೊಸ ದರದಲ್ಲಿ ಲಸಿಕೆ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು