News Karnataka Kannada
Saturday, April 20 2024
Cricket
ಬೆಂಗಳೂರು ನಗರ

ಕೋವಿಡ್‌ ನಲ್ಲಿ ತಂದೆ ಕಳೆದುಕೊಂಡ ಬಾಲಕನ ಹುಟ್ಟಿದ ಹಬ್ಬ ಆಚರಿಸಿದ ಆಸ್ಪತ್ರೆ ಸಿಬ್ಬಂದಿ

Photo Credit :

 ಕೋವಿಡ್‌ ನಲ್ಲಿ ತಂದೆ ಕಳೆದುಕೊಂಡ ಬಾಲಕನ ಹುಟ್ಟಿದ ಹಬ್ಬ ಆಚರಿಸಿದ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರು : ಇಲ್ಲಿನ ಕಗ್ಗದಾಸಪುರ ಲಕ್ಷ್ಮೀ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಬಾಲಕನೋರ್ವನ ಜನ್ಮ ದಿನಾಚರಣೆ ನಡೆಯಿತು.
ಈ ಬಾಲಕನ ತಂದೆ ಕೆಲವು ದಿನಗಳ ಹಿಂದೆ ಕೋವಿಡ್​ಗೆ ಬಲಿಯಾಗಿದ್ದರು. ತಾಯಿ ಮಗನ‌ ಜೊತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಬಾಲಕನನನ್ನು ಸಂತಸಪಡಿಸಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಆಸ್ಪತ್ರೆಯ ಮಾಲೀಕ ಡಾ. ಜಯಮಾಲ ಶಾಂಭೋಶಿವ ಮತ್ತು ಸಿಬ್ಬಂದಿ ಹುಟ್ಟುಹಬ್ಬ ಆಚರಿಸಿದ್ದಾರೆ. ಪ್ರತಿ ವರ್ಷ ಅಪ್ಪ, ಅಮ್ಮ ಸೇರಿ ನನ್ನ ಜನ್ಮದಿನ ಆಚರಿಸುತ್ತಿದ್ದರು ಎಂದು ಬಾಲಕ ಹೇಳಿಕೊಂಡಿದ್ದನಂತೆ. ಈ ವರ್ಷ ಆತ ಅಪ್ಪನನ್ನು ಕಳೆದುಕೊಂಡಿದ್ದಾನೆ. ಜೊತೆಗೆ ತಾಯಿಯೂ ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ, ಆಸ್ಪತ್ರೆ ಸಿಬ್ಬಂದಿ ಕೇಕ್​ ಕತ್ತರಿಸಿ ಹುಟ್ದಬ್ಬ ಆಚರಿಸುವ ಮೂಲಕ ಆತನನ್ನು ಸಂತೈಸಿ, ಶುಭ ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು