News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ಕೊರೋನಾ ಅಪ್ಡೇಟ್: ರಾಜ್ಯದಲ್ಲಿ 39,505 ಮಂದಿಗೆ ತಗುಲಿದ ಸೋಂಕು

Photo Credit :

ಕೊರೋನಾ ಅಪ್ಡೇಟ್: ರಾಜ್ಯದಲ್ಲಿ 39,505 ಮಂದಿಗೆ ತಗುಲಿದ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್, ಕಟ್ಟುನಿಟ್ಟು ಕ್ರಮಗಳು ಜಾರಿಯಾಗಿದ್ದರೂ , ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರೆದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನು ನಿನ್ನೆ ( ಮೇ 10 ) 39,505 ಮಂದಿಗೆ ಸೋಂಕು ತಗುಲಿದ್ದು , ಬರೋಬ್ಬರಿ 596 ಜನ ಸಾವನ್ನಪ್ಪಿದ್ದಾರೆ . 

 

ಈ ಮೂಲಕ ಸೋಂಕಿತರ ಸಂಖ್ಯೆ 19,73,683 ಕ್ಕೆ ಏರಿಕೆಯಾಗಿದೆ ಸಾವಿನ ಸಂಖ್ಯೆ 19,372 ಕ್ಕೆ ತಲುಪಿದೆ . ಇನ್ನು ರಾಜ್ಯದಲ್ಲಿ 52,188 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು , ಒಟ್ಟು 13,83,285 ಮಂದಿ ಈ ವರೆಗೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ . ರಾಜ್ಯದಲ್ಲಿ ಒಟ್ಟು 5,71,006 ಸಕ್ರಿಯ ಪ್ರಕರಣಗಳಿವೆ .

 

 ಬೆಂಗಳೂರಿನಲ್ಲಿ 16,747 ಮಂದಿಗೆ ಸೋಂಕು ದೃಢಪಟ್ಟಿದ್ದು , 374 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ . ಬಾಗಲಕೋಟೆ 968 , ಬಳ್ಳಾರಿ 973 , ಬೆಳಗಾವಿ 736 , ಬೆಂಗಳೂರು ಗ್ರಾಮಾಂತರ 704 , ಬೆಂಗಳೂರು ನಗರ 16,747 , ಬೀದರ್ 305 , ಚಾಮರಾಜನಗರ 623 , ಚಿಕ್ಕಬಳ್ಳಾಪುರ 599 , ಚಿಕ್ಕಮಗಳೂರು 362 , ಚಿತ್ರದುರ್ಗ 172 , ದಕ್ಷಿಣ ಕನ್ನಡ 1,175 , ದಾವಣಗೆರೆ 197 , ಧಾರವಾಡ 1,006 , ಗದಗ 332 , ಹಾಸನ 1,800 , ಹಾವೇರಿ 214 , ಕಲಬುರಗಿ 988 , ಕೊಡಗು 534 , ಕೋಲಾರ 755 , ಕೊಪ್ಪಳ 412 , ಮಂಡ್ಯ 1,133 , ಮೈಸೂರು 1,537 , ರಾಯಚೂರು 582 , ರಾಮನಗರ 337 , ಶಿವಮೊಗ್ಗ 820 , ತುಮಕೂರು 2,168 , ಉಡುಪಿ 855 , ಉತ್ತರ ಕನ್ನಡ 885 , ವಿಜಯಪುರ 659 ಮತ್ತು ಯಾದಗಿರಿಯಲ್ಲಿ 727 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು