News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಕೊರೊನಾ ಕರಿನೆರಳಿನ ಛಾಯಾಚಿತ್ರ ಪ್ರದರ್ಶನ

Bnglr
Photo Credit :

ಬೆಂಗಳೂರು: ಮನುಕುಲ ಕಂಡರಿಯದ ಸಾಂಕ್ರಾಮಿಕವೊಂದು ಒಕ್ಕರಿಸಿ ಇಡೀ ಪ್ರಪಂಚದಾದ್ಯಂತ ಸಾವು ನೋವುಗಳಿಗೆ  ಸಾಕ್ಷಿಯಾಗಿ ಜನಜೀವನವನ್ನು ತತ್ತರಿಸುವಂತೆ ಮಾಡಿದೆ. ಈ ಸಾಂಕ್ರಾಮಿಕ ತಂದೊಡ್ಡಿದ ಸವಾಲುಗಳು ಮತ್ತು ಜನಸಾಮಾನ್ಯರ ಬದುಕು  ವಿನಾಶದತ್ತ ಸಾಗಿದ ಚಿತ್ರಣಗಳ ಕುರಿತು ಕಂದವಾರ ವೆಂಕಟೇಶ್ ಅವರು, ಛಾಯಾಚಿತ್ರಗಳ ಪ್ರದರ್ಶನವನ್ನು ರಾಜರಾಜೇಶ್ವರಿ ನಗರದಲ್ಲಿರುವ ಕರ್ನಾಟಕ ಚಿತ್ರಕಲಾ  ಪರಿಷತ್‌ನ ಕಾಲೇಜ್ ಆಫ್ ಫೈನ್ ಆಟ್ರ್ಸ್ ನಲ್ಲಿ ಏಪ್ರಿಲ್ 6 ರಿಂದ ಏಪ್ರಿಲ್ 30ರವರೆಗೆ ಬೆಳಗ್ಗೆ 10ಗಂಟೆಯಿಂದ ಸಾಯಂಕಾಲ 4ಗಂಟೆಯವರೆಗೆ ಏರ್ಪಡಿಸಿದ್ದಾರೆ.

ಜನವರಿ 2020ರಲ್ಲಿ ಮನುಕುಲ ಕಂಡರಿಯದ ಸಾಂಕ್ರಾಮಿಕವೊಂದು ಒಕ್ಕರಿಸಿ ಇಡೀ ಪ್ರಪಂಚದಾದ್ಯಂತ ಸಾವು ನೋವುಗಳಿಗೆ ಸಾಕ್ಷಿಯಾಗಿ ಜನಜೀವನವನ್ನು ತತ್ತರಿಸುವಂತೆ ಮಾಡಿತು. ಕಳೆದ ವರ್ಷ 2021 ರಲ್ಲಿ ಸಾಂಕ್ರಾಮಿಕದ ಎರಡನೆಯ ಅವತಾರ  ಸಮಾಧಾನದಿಂದಿದ್ದ ಭಾರತದ ಮೇಲೆರಗಿ ಇಡೀ ದೇಶವನ್ನು ಅಕ್ಷರಶಃ ನಡುಗಿಸಿತು.

ಭಾರತದಲ್ಲಿ ಅಗತ್ಯಪ್ರಮಾಣದ ಆರೋಗ್ಯ ಸೇವೆಗಳು ಲಭ್ಯವಿಲ್ಲದೆ ದೇಶದಾದ್ಯಂತ ಸಾವಿರಾರು ಮಂದಿ ಸಾವಿಗೀಡಾದರು,  ಲಕ್ಷಾಂತರ ಮಂದಿಗೆ ಸೋಂಕು ತಾಕಿತು, ಸಾಮಾನ್ಯರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡರು. ವಿಶೇಷವಾಗಿ ಬಡವರು, ವಲಸಿಗರು, ಕಾರ್ಮಿಕರು, ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರು, ಬೀದಿ ಬದಿಯ ಹಣ್ಣು, ತರಕಾರಿ ವ್ಯಾಪಾರಿಗಳು, ಮಹಿಳೆಯರು ಮಕ್ಕಳು ತೀವ್ರತರವಾಗಿ ತೊಂದರೆಗೀಡಾದರು.

ಇವರ ಬದುಕು ಮತ್ತು ಜೀವನೋಪಾಯದ ಮಾರ್ಗಗಳು ಜರ್ಜರಿತವಾದವು. ಕಡೆಗೆ ಇವರೆಲ್ಲಾ ವಿಧಿಯಾಟವೆಂದು ಸುಮ್ಮನಾಗಬೇಕಾಯಿತು. ಮೊದಲೆರಡು ಅಲೆಗಳಲ್ಲಿ ಸಾಂಕ್ರಾಮಿಕವನ್ನು ಸರಿಯಾಗಿ ನಿರ್ವಹಿಸದೆ ಜನರ ಸಹಜ ಜೀವನಕ್ಕೆ  ತೊಡಕುಂಟಾಗಿದ್ದಲ್ಲದೆ ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಮಾಡಿದ ಲಾಕ್ ಡೌನ್ ಮತ್ತಿತ್ತರ ನಿರ್ಬಂಧಗಳಿಂದ ಹೇಳಿಕೊಳ್ಳಲಾಗದ ಸಂಕಟಕ್ಕೆ ಲಕ್ಷಾಂತರ ಮಂದಿ ಗುರಿಯಾದರು. ಏಪ್ರಿಲ್ ನಿಂದ ಡಿಸೆಂಬರ್ 2020ರ ವರೆಗೆ ಮೊದಲ ಅಲೆಯಲ್ಲಿ ಲಾಕ್ ಡೌನ್ ಮುಂದುವರಿಸಿದ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಬಹಳ ತೊಂದರೆಗೀಡಾದರು. ಏಪ್ರಿಲ್ ನಿಂದ ಜುಲೈ 2021ರ ಎರಡನೆಯ ಅಲೆಯಲ್ಲಿ ಅನೇಕದ ಜೀವನೋಪಾಯಕ್ಕೆ ಪೆಟ್ಟು ಬಿದ್ದಿತು. ಇದರಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗಿದ್ದಲ್ಲದೆ ಅಸಂಘಟಿತ ವಲಯದಲ್ಲಿ ಸಾವಿರಾರು ಮಂದಿ ಕೆಲಸ ಕಳೆದುಕೊಂಡರು.

ಮಾರ್ಚ್ 23, 2020 ರಂದು ಪ್ರಕಟಿಸಿದ ಲಾಕ್ ಡೌನ್ ಕೇವಲ ನಾಲ್ಕು ಗಂಟೆಗಳಷ್ಟು ಮುನ್ನವಷ್ಟೇ ಪ್ರಕಟಿಸಲಾಗಿತ್ತು. ಇದರಿಂದ ಎಲ್ಲಾ ಚಟುವಟಿಕೆಗಳು ತಟಸ್ಥವಾದವು. ಸಾರ್ವಜನಿಕ ಸಾರಿಗೆ ನಿಷೇಧಿಸಿದ್ದು ಮತ್ತು ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿದ್ದು ಹಲವು ದಿನಗಳ ಕಾಲ ಜನರನ್ನು ಇದ್ದಲ್ಲೇ ಸಿಕ್ಕಿಬೀಳುವ ಪರಿಸ್ಥಿತಿಗೆ ತಂದೊಡ್ಡಿತು. ಲಾಕ್ ಡೌನ್ ನಿರ್ಬಂಧಗಳನ್ನು  ಸಡಿಲಿಸಿ, ರಸ್ತೆ ಸಂಚಾರ, ರೈಲು ಸಂಚಾರ, ಏರೋಪ್ಲೇನ್ ಗಳ ಸೇವೆಗಳನ್ನು ಆರಂಭಿಸಿದಾಗ ಸಾವಿರಾರು ಕಾರ್ಮಿಕರು ವಿಶೇಷವಾಗಿ ವಲಸೆ ಕಾರ್ಮಿಕರು ತಮಗೆ ಸಿಕ್ಕ ಸಂಚಾರ ವ್ಯವಸ್ಥೆಯಲ್ಲಿ ತಂತಮ್ಮ ಊರುಗಳಿಗೆ ತೆರಳಿದರು. ಎಲ್ಲರಿಗೂ ತಮ್ಮ ಜೀವನೋಪಾಯಕ್ಕಿಂತ ಜೀವ ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಇವೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಬೆಂಗಳೂರಿನ ಪ್ರಶಸ್ತಿ ವಿಜೇತ, ಪರಿಣಿತ ಫೋಟೋ ಜರ್ನಲಿಸ್ಟ್ ಕೆ.ವೆಂಕಟೇಶ್ ತಮ್ಮ ಕ್ಯಾಮರಾದೊಂದಿಗೆ ಜನರು ಅನುಭವಿಸಿದ ಸಂಕಟ, ನೋವು, ಕಷ್ಟಗಳು ಹಾಗೂ ಜೀವನೋಪಾಯದ ಸವಾಲುಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ದಾಖಲಾಗಿದ್ದು ಮರೆಯಲಾರದ ಘಟನೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು