News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ಕಾಫಿ ರಫ್ತಿನಲ್ಲಿ ಭಾರತದ ನೂತನ ದಾಖಲೆ : ಒಂದು ಬಿಲಿಯನ್ ಡಾಲರ್ ಮೀರಿದ ವಹಿವಾಟು

Cofee
Photo Credit :

ಬೆಂಗಳೂರು ಏಪ್ರಿಲ್ 4 ; ಕೇಂದ್ರ ಸರ್ಕಾರವು ಕೈಗೊಂಡಿರುವ ರಫ್ತು ಉತ್ತೇಜನ ಮತ್ತು ಹಣಕಾಸು ನೀತಿಯಿಂದಾಗಿ 2021-22 ನೇ ಸಾಲಿನಲ್ಲಿ ಒಟ್ಟು 418 ಬಿಲಿಯನ್ ಅಮೇರಿಕನ್ ಡಾಲರ್ ಮೌಲ್ಯದ ಸರಕುಗಳು ರಫ್ತಾಗಿ ದಾಖಲೆಯೇ ನಿರ್ಮಾಣವಾಗಿದೆ.

ಇದೀಗ ಕೊಡಗಿನ ಜೀವನಾಡಿ ಆಗಿರುವ ಕಾಫಿಯ ರಫ್ತಿನಲ್ಲೂ ಕೂಡ ದೇಶವು ಮೊಟ್ಟ ಮೊದಲ ಬಾರಿಗೆ ದಾಖಲೆ ಪ್ರಮಾಣದ ಕಾಫಿಯನ್ನೂ ರಫ್ತು ಮಾಡಲಾಗಿದೆ. ದೇಶದ ಕಾಫಿ ರಫ್ತು ಮೌಲ್ಯ ಯಾವತ್ತೂ ಒಂದು ಬಿಲಿಯನ್ ಅಮೇರಿಕನ್ ಡಾಲರ್ ಮೀರಿರಲಿಲ್ಲ.

ಆದರೆ ಕಳೆದ ಸಾಲಿನಲ್ಲಿ ಈ ಮೌಲ್ಯ 1.042 ಅಮೇರಿಕನ್ ಡಾಲರ್ ಮೊತ್ತವನ್ನೂ ಮೀರಿದ್ದು 2020-21 ನೇ ಸಾಲಿಗೆ
ಹೋಲಿಸಿದರೆ ರಫ್ತು ಮೌಲ್ಯದಲ್ಲಿ ಶೇಕಡಾ 42 ರಷ್ಟು ಹೆಚ್ಚಳ ದಾಖಲಾಗಿದೆ.

ಎರಡು ವರ್ಷಗಳ ಕೋವಿಡ್ ಲಾಕ್ ಡೌನ್ , ಉಕ್ರೇನ್ –ರಷ್ಯಾ ನಡುವಿನ ಯುದ್ದದ ಕಾರಣದಿಂದಾಗಿ ರಫ್ತು ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದರೂ ರಫ್ತಿನಲ್ಲಿ ಗಣನೀಯ ಏರಿಕೆ ದಾಖಲಾಗಿರುವುದು ಉತ್ತಮ ಸಾಧನೆಯೇ ಆಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಒಟ್ಟು ಕಾಫಿ ರಫ್ತು ಮೌಲ್ಯ 734.98 ಮಿಲಿಯನ್ ಡಾಲರ್ ಆಗಿತ್ತು. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಈ ಮೌಲ್ಯ 5451.90 ಕೋಟಿ ರೂಪಾಯಿಗಳಾಗಿತ್ತು. ಈಗ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ 42 ರಷ್ಟು ಏರಿಕೆ ಕಂಡು 7766.77 ಕೋಟಿ ರೂಪಾಯಿಗಳಿಗೆ ಏರಿಕೆ ದಾಖಲಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಒಟ್ಟು 3.10 ಲಕ್ಷ ಟನ್ ಗಳಷ್ಟು ಕಾಫಿ ರಫ್ತಾಗಿದ್ದರೆ ಕಳೆದ ಸಾಲಿನಲ್ಲಿ ಒಟ್ಟು 4.19
ಲಕ್ಷ ಟನ್ ಕಾಫಿಯನ್ನು ರಫ್ತು ಮಾಡಲಾಗಿದೆ. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೆ ಜಿ ಜಗದೀಶ ಅವರು ಕೇಂದ್ರ ವಾಣಿಜ್ಯ ಸಚಿವಾಲಯವು 1.07 ಬಿಲಿಯನ್ ಡಾಲರ್ ಮೌಲ್ಯದ ಕಾಫಿ
ರಫ್ತು ಮಾಡುವ ಗುರಿಯನ್ನು ನಿಗದಿಪಡಿಸಿತ್ತು.

ಬ್ರೆಜಿಲ್ ಹಾಗೂ ಕೊಲಂಬಿಯಾದಲ್ಲಿ ಹಿಮಪಾತದಿಂದಾಗಿ ಬೆಳೆ ನಷ್ಟ , ಜತೆಗೇ ಜಾಗತಿಕ ಮಾರುಕಟ್ಟೆಗೆ ಕಾಫಿಯ ಸರಬರಾಜು ಕಡಿಮೆ ಆಗಿದ್ದರಿಂದ ಅರೇಬಿಕಾ ಕಾಫಿಯ ಬೆಲೆ ಏರಿಕೆ ಆಗಿ ರಫ್ತು ದಾಖಲೆ ಪ್ರಮಾಣದಲ್ಲಿ ಆಯಿತು ಎಂದರು. ರಫ್ತನ್ನು ಉತ್ತೇಜಿಸಲು ದೇಶದ ರಫ್ತುದಾರರು ಮತ್ತು 12 ಕ್ಕೂ ಹೆಚ್ಚು ವಿದೇಶಗಳ ಆಮದುದಾರರ ಜತೆ ವರ್ಚುಯಲ್ (virtual) ಸಭೆಯನ್ನು ಕಾಫಿ ಮಂಡಳಿ ಆಯೋಜಿಸಿತ್ತು ಎಂದೂ ಅವರು ತಿಳಿಸಿದರು.

ದೇಶದ ಕಾಫಿ ರಫ್ತುದಾರರ ಸಂಘದ ಅದ್ಯಕ್ಷ ರಮೇಶ್ ರಾಜಾ ಅವರು ಮಾತನಾಡಿ ಹಲವು ಸವಾಲುಗಳ ನಡುವೆಯೂ ಕಾಫಿ ರಫ್ತು ಏರಿಕೆ ದಾಖಲಿಸಿದೆ ಎಂದರು. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ , ಕೋವಿಡ್ ಲಾಕ್ ಡೌನ್ , ಇಂಧನ ದರ ಏರಿಕೆಯಿಂದ ಹೆಚ್ಚಳಗೊಂಡ ಸಾಗಾಣಿಕಾ ವೆಚ್ಚ, ಕಂಟೇನರ್ ಗಳ ಕೊರತೆ ಮತ್ತು ರಷ್ಯಾ ಉಕ್ರೇನ್ ಯುದ್ದ
ಕೂಡ ಕರಗುವ (instant) ಕಾಫಿ ರಫ್ತಿಗೆ ಹೊಡೆತ ನೀಡಿತು ಎಂದರು.

ದೇಶದಿಂದ ರಫ್ತಾಗುವ ಕರಗುವ ಕಾಫಿಯ ಒಟ್ಟು ಶೇಕಡಾ 15 ರಷ್ಟನ್ನು ರಷ್ಯಾವೇ ಆಮದು ಮಾಡಿಕೊಳ್ಳುತ್ತಿದೆ. ಕಡಿಮೆ ಬೆಲೆಯ ಕಾಫಿಯನ್ನು ವಿದೇಶಗಳಿಂದ ಇಲ್ಲಿಗೆ ಆಮದು ಮಾಡಿಕೊಂಡು ಅದನ್ನು ಕರಗುವ ಕಾಫಿಯನ್ನಾಗಿ ಸಂಸ್ಕರಿಸಿ ಪುನಃ ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಹೀಗಾಗಿ ದೇಶದ ಒಟ್ಟು ಉತ್ಪಾದನೆ 3.5 ಲಕ್ಷ ಟನ್ ಗಳಾಗಿದ್ದರೂ ಒಟ್ಟು 4.19 ಲಕ್ಷ ಟನ್ ರಫ್ತು ಮಾಡಲಾಗಿದೆ.

2020-21 ನೇ ಸಾಲಿನಲ್ಲಿ ದೇಶದ ಒಟ್ಟು ಕಾಫಿ ಉತ್ಪಾದನೆ 3.48 ಲಕ್ಷ ಟನ್ ಗಳೆಂದು ಕಾಫಿ ಮಂಡಳಿಯು ತನ್ನ ಮುಂಗಾರು ನಂತರದ ಅಂದಾಜಿನ ವರದಿಯಲ್ಲಿ ತಿಳಿಸಿದ್ದು ಇದರಲ್ಲಿ 2.49 ಲಕ್ಷ ಟನ್ ರೊಬಸ್ಟಾ ಮತ್ತು 99 ಸಾವಿರ ಟನ್ ಅರೇಬಿಕಾ ಕಾಫಿ ಆಗಿದೆ.

ದಾಖಲೆ ಪ್ರಮಾಣದ ಕಾಫಿ ರಫ್ತಿನ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ ಸಣ್ಣುವಂಡ ಕಾ ವೇರಪ್ಪ ಅವರು ರಷ್ಯಾ –ಉಕ್ರೇನ್ ಯುದ್ದ ನಿಂತ ನಂತರ ಮತ್ತೆ ಕಾಫಿ ದರ ಏರಿಕೆ ಕಾಣಲಿದೆ ಎಂದು ಹೇಳಿದರು. ಕಾಫಿ ಬೆಳೆಯವ ಪ್ರಮುಖ ದೇಶಗಳಾದ ಬ್ರೆಜಿಲ್ ವಿಯಟ್ನಾಂ , ಕೊಲಂಬಿಯಾ ಮುಂತಾದವು ತಮ್ಮ ಉತ್ಪದನೆಯ ಕೆಲವಂಶವನ್ನು ಬಫರ್ ಸ್ಟಾಕ್ ಆಗಿ ದಾಸ್ತಾನು ಇರಿಸುತಿದ್ದವು.

ಅದರೆ ಬದಲಾದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಈಗ ಬಫರ್ ಸ್ಟಾಕ್ ಸಂಪೂರ್ಣ ಖಾಲಿಯಾಗಿದೆ ಎಂದರು. ಇನ್ನು ಕನಿಷ್ಟ ಎರಡು ವರ್ಷ ಕಾಫಿ ದರ ಏರುಮುಖವಾಗಿರಲಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು