News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಕರ್ನಾಟಕ ಬಂದ್‌: ಪ್ರತಿಭಟನೆ, ಹಲವರ ವಶ

Photo Credit :

ಕರ್ನಾಟಕ ಬಂದ್‌: ಪ್ರತಿಭಟನೆ, ಹಲವರ ವಶ

ಬೆಂಗಳೂರು: ರೈತ ವಿರೋಧ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಪಸ್‌ ಪಡೆಯಲು ಆಗ್ರಹಿಸಿ ಹಲವು ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಗೆ ಮುಂದಾದ ನಾರಾಯಣ ಗೌಡ ಮತ್ತು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಹಲವೆಡೆ ಪ್ರತಿಭಟನೆಗಳು, ರಸ್ತೆ ತಡೆ, ಮುಂತಾದ ರೀತಿಯ ಪ್ರತಿಭಟನೆಗಳು ನಡೆಯುತ್ತಿದೆ. ಇತರ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ.

ಉಡುಪಿ: ಉಡುಪಿಯಲ್ಲಿ ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂದ್ ಕರೆ ನೀಡಿದ್ದರೂ, ಬಸ್ ಸಂಚಾರ ಎಂದಿನಂತೆ ಇದ್ದ ಕಾರಣ ಸಂಘಟನೆಗಳು ಬಸ್ ಬಂದ್ ಮಾಡಲು ಮನವಿ ಮಾಡಿದರು. ಆದರೆ, ಇದು ಪ್ರಯೋಜನವಾಗದೇ ಇದ್ದ ಕಾರಣ ರಸ್ತೆ ತಡೆ ಮಾಡಲು ಮುಂದಾದರು. ಉಡುಪಿ ಸಿಟಿ ಬಸ್ ನಿಲ್ದಾಣದ ಪ್ರವೇಶ ಭಾಗದಲ್ಲಿ ಕುಳಿತು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು