News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ಎರಡು ತಿಂಗಳಲ್ಲಿ 40 ಸಾವಿರ ಮಕ್ಕಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು

Photo Credit :

ಎರಡು ತಿಂಗಳಲ್ಲಿ 40 ಸಾವಿರ ಮಕ್ಕಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು

ಬೆಂಗಳೂರು : ಕಳೆದ 2 ತಿಂಗಳಲ್ಲಿ ರಾಜ್ಯದಲ್ಲಿ ಹೆಚ್ಚು ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದ ಮಾತುಗಳಿಗೆ ಇದೀಗ ಪುಷ್ಟಿ ಸಿಕ್ಕಿದೆ. ಕೇವಲ ಎರಡು ತಿಂಗಳಲ್ಲಿ 40 ಸಾವಿರ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ . 

 

ಹೌದು, ಮಾರ್ಚ್ 18 ರಿಂದ ಮೇ 18 ರವರೆಗೆ 0-9 ವಯೋಮಾನದ ಶೇ .143 ರಷ್ಟು ಮಕ್ಕಳಲ್ಲಿ ಅಂದರೆ 39,846 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10-19 ವಯೋಮಾನದ ಮಕ್ಕಳಲ್ಲಿ ಶೇ .160 ರಷ್ಟು ಅಂದರೆ 1,05,044 ಮಕ್ಕಳಿಗೆ ಸೋಂಕು ದೃಢಪಟ್ಟಿದೆ ಎಂದು ವರದಿಯೊಂದು ತಿಳಿಸಿದೆ. 

 

ಇಷ್ಟೇ ಅಲ್ಲದೆ, ಇತ್ತೀಚೆಗೆ ಕೊರೋನಾದಿಂದ ಮಕ್ಕಳ ಸಾವಿನ ಪ್ರಮಾಣವೂ ಹೆಚ್ಚಳವಾಗಿದ್ದು , ಕಳೆದ ಎರಡು ತಿಂಗಳಿನಲ್ಲಿ ಕೊರೋನಾದಿಂದ ಸೋಂಕಿನಿಂದ ಪ್ರಾಣ ಬಿಟ್ಟ ಮಕ್ಕಳ ಸಂಖ್ಯೆ 46 ರಿಂದ 62 ಕ್ಕೆ ಏರಿಕೆಯಾಗಿದೆ . ಇದರಿಂದ ಮನೆಯವರಿಗೂ ಸೋಂಕು ತಗುಲುವ ಅಪಾಯ ಹೆಚ್ಚಿದೆ ಎಂದು ಅಭಿಪ್ರಾಯಿಸಲಾಗಿದೆ.

 

ಈ ಕುರಿತಂತೆ ಮಕ್ಕಳ ತಜ್ಞೆ ಡಾ . ಸುಪ್ರಾಜ್ ಚಂದ್ರಶೇಖರ್ ಹೇಳಿಕೆಯೊಂದನ್ನು ನೀಡಿದ್ದು, ಸೋಂಕು ತಗುಲಿದ 10 ಮಂದಿ ಮಕ್ಕಳಲ್ಲಿ ಒಂದು ಮಗು ಮಾತ್ರ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಇದೆ , ಉಳಿದ ಮಕ್ಕಳನ್ನು ಹೋಮ್ ಐಸೋಲೇಷನ್ ನಲ್ಲಿಟ್ಟು ಗುಣಮುಖರಾಗಿ ಮಾಡಬಹುದು ಎನ್ನುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು