News Karnataka Kannada
Sunday, April 14 2024
Cricket
ಬೆಂಗಳೂರು ನಗರ

ಇನ್ಮುಂದೆ ದ್ವಿಚಕ್ರ ವಾಹನಗಳಿಗೆ  ಎರಡು ಕಡೆ ಮಿರರ್, ಇಂಡಿಕೇಟರ್ ಇಲ್ಲದೆ ಹೊದರೆ ದಂಡ

Traffic Police
Photo Credit :

ಬೆಂಗಳೂರು : ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇನ್ಮುಂದೆ ದ್ವಿಚಕ್ರ ವಾಹನಗಳಿಗೆ  ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್ ಇಲ್ಲದೆ ಹೊದರೆ 500 ರೂ.ದಂಡ ವಿಧಿಸಲು ಮುಂದಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದು, ಈಗ ದ್ವಿಚಕ್ರ ವಾಹನಗಳಿಗೆ ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಮುಂದಿನ ವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ. ನಿಯಮ ಉಲ್ಲಂಘಿಸಿದರೆ 500 ರೂ. ದಂಡ ತೆರಬೇಕಾಗುತ್ತದೆ.

ಈ ಕುರಿತು ಮಾಹಿತಿ ನೀಡಿರುವ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ನಗರದಲ್ಲಿ ಸಂಭವಿಸುತ್ತಿರುವ ಅಪಘತಗಳಲ್ಲಿ ಹೆಚ್ಚಿನದಾಗಿ ದ್ಚಿಚಕ್ರ ವಾಹನಗಳೇ ತುತ್ತಾಗುತ್ತಿದ್ದು, ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಿಗೆ 2 ಕಡೆ ಮಿರರ್ ಹಾಗೂ ಇಂಡಿಕೇಟರ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು