News Karnataka Kannada
Monday, April 22 2024
Cricket
ಬೆಂಗಳೂರು ನಗರ

ಇಂದಿನಿಂದ ಮಹದೇಶ್ವರಬೆಟ್ಟದಲ್ಲಿ ಭಕ್ತರಿಗೆ ದೇವರ ದರ್ಶನ

Photo Credit :

ಇಂದಿನಿಂದ ಮಹದೇಶ್ವರಬೆಟ್ಟದಲ್ಲಿ ಭಕ್ತರಿಗೆ ದೇವರ ದರ್ಶನ

ಮಲೆಮಹದೇಶ್ವರಬೆಟ್ಟ: ಕೋರೊನಾ ಸೋಂಕಿನಿಂದ ಮಲೆ ಮಹದೇಶ್ವರ ದೇವರ ದರ್ಶನಕ್ಕೆ ಇದುವರೆಗೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತಾದರೂ ಇಂದಿನಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೋರೊನಾ ಸೋಂಕಿನ ಭೀತಿಯಿಂದ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಹೊರಡಿಸಿದ ಆದೇಶ ಪಾಲನೆ ಹಾಗೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು.

 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಗಸ್ಟ್ 2 ರಿಂದ ಅನ್‍ಲಾಕ್ ಆದೇಶ ಹೊರÀ್ಟ್ದ ಬೆನ್ನ ಹಿಂದೆಯೇ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ರವರು ಸಹ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಸಂಜೆ ಲಾಕ್ ಡೌನ್ ಹಾಗೂ ಭಾನುವಾರದ ಲಾಕ್‍ಡೌನ್‍ನ್ನು ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.

 

ಜಿಲ್ಲಾಧಿಕಾರಿಗಳ ಆದೇಶದನ್ವಯ ಜಿಲ್ಲೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಮತ್ತು ದೇವಾಲಯದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನದ ಅವಕಾಶ ಸಿಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸಂಖ್ಯೆ ಅಧಿಕವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

 

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿಕೆ ನೀಡಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಎಂದಿನಂತೆ ಪ್ರತಿನಿತ್ಯ ಬೆಳಗ್ಗೆ ದೇವರಿಗೆ ಪೂಜೆ ಕೈಂಕರ್ಯಗಳು ನಡೆಯಲಿದೆ, ಮುಂಜಾನೆ 4 ರಿಂದ ರಾತ್ರಿ 7 ತನಕ ಸಾರ್ವಜನಿಕರಿಗೆ ದೇವರ ದರ್ಶನ ಸಿಗಲಿದೆ ಹಾಗೂ ಬರುವ ಭಕ್ತರಿಗೆ ವಸತಿ ಸೌಲಭ್ಯವೂ ಸಿಗಲಿದೆ ಎಂದು ತಿಳಿಸಿದ್ದಾರೆ.

 

ಆದರೆ ದೇವಾಲಯದಲ್ಲಿ ಯಾವುದೇ ರೀತಿಯ ಉತ್ಸವಗಳು ಇರುವುದಿಲ್ಲ, ದೇವಾಲಯ ಒಳಗಡೆ ಕುಳಿತುಕೊಳ್ಳುವಂತಿಲ್ಲ, ಪೂಜೆ ಮಾಡಿಸಬಹುದಾಗಿದೆ. ಭಕ್ತರಿಗೆ ಲಾಡು ಪ್ರಸಾದ ವ್ಯವಸ್ಥೆಯಿದ್ದು, ಭಕ್ತರು ದೇವಾಲಯಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿರಬೇಕು, ಸಾಮಾಜಿಕ ಅಂತರದಿಂದಲೇ ಮಹದೇಶ್ವರ ದರ್ಶನ ಪಡೆಯಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು