News Karnataka Kannada
Thursday, April 25 2024
Cricket
ಬೆಂಗಳೂರು ನಗರ

ಇಂಗ್ಲೀಷ್ ಬದಲು ಹಿಂದಿ ಬಳಸಿ‌: ಅಮಿತ್ ಶಾ ತಪ್ಪೇನೂ ಹೇಳಿಲ್ಲ- ಪ್ರಹ್ಲಾದ್ ಜೋಶಿ

Lok Sabha Elections
Photo Credit :

ಬೆಂಗಳೂರು : ಇಂಗ್ಲೀಷ್ ಬದಲು ಹಿಂದಿ ಬಳಸಿ‌ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಅಮಿತ್ ಶಾ ಅವರು ತಪ್ಪೇನೂ ಹೇಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶನಿವಾರ ಸಮರ್ಥಿಸಿಕೊಂಡಿದ್ದಾರೆ.

ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ನಿಮ್ಮ ರಾಜ್ಯದಲ್ಲಿ ನಿಮ್ಮ ಭಾಷೆ ಇರಲಿ. ರಾಷ್ಟ್ರೀಯವಾಗಿ ಇಂಗ್ಲೀಷ್ ಬದಲು ಹಿಂದಿ‌ ಬಳಸಿ ಅಂದಿದಾರೆ. ಮೊಗಲರಷ್ಟೇ ದೇಶ ಹಾಳು ಮಾಡಿದ ಇಂಗ್ಲೀಷರ ಇಂಗ್ಲೀಷ್ ಬೇಕು ನಮಗೆ ಆದ್ರೆ ಹಿಂದಿ‌ ಬೇಡ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ನಮ್ಮ‌ದೇಶದಲ್ಲಿ ಎಲ್ಲ ಇದ್ದೂ ಅಭಿವೃದ್ಧಿಶೀಲ ರಾಷ್ಟ್ರ ಆಗಿದೆ. ನಮ್ಮ ರಾಷ್ಟ್ರ ಈ ಶತಮಾನದ ರಾಷ್ಟ್ರ ಆಗಬೇಕು. ಇದು ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ಆದರೆ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತು ಮಾತನಾಡಿದ ಜೋಶಿ, ಮೋದಿ ಮೇನಿಯಾ ಶುರುವಾಗಿದೆ. ದೇಶದಲ್ಲಿ ಮೋದಿಯವ್ರು ಏನೇ ಹೇಳಿದ್ರೂ ವಿರೋಧ ಬರುತ್ತೆ. ಮೋದಿಯವ್ರು ಏನೇ ಹೇಳಿದ್ರು ವಿರೋಧಿಸುವ ಜನ ಇದ್ದಾರೆ. ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈಗ ನಮ್ಮ ಪ್ರಜಾಪ್ರಭುತ್ವ ಬಹಳವಾಗಿ ಪಕ್ವಗೊಂಡಿದೆ. ಸಮರ್ಥ ಪ್ರಜಾಪ್ರಭುತ್ವ ಇದ್ರೆ ಒಂದೇ ಕಡೆ ಅಧಿಕಾರ ಕೇಂದ್ರೀಕರಣ ಆಗಲ್ಲ. ಈ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಲು ಒಂದು ರಾಷ್ಟ್ರ ಒಂದು ಚುನಾವಣೆ ಅಗತ್ಯ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು