News Karnataka Kannada
Monday, April 22 2024
Cricket
ಬೆಂಗಳೂರು ನಗರ

ಆಸ್ಪತ್ರೆಗಳ ಪುನಶ್ಚೇತನಗೊಳಿಸುವ ಮೂಲಕ ಕೋವಿಡ್ ಬೆಡ್ ಗಳನ್ನು ಸ್ಥಾಪಿಸಿದ ತೇಜಸ್ವಿ ಸೂರ್ಯ

Photo Credit :

ಆಸ್ಪತ್ರೆಗಳ ಪುನಶ್ಚೇತನಗೊಳಿಸುವ ಮೂಲಕ ಕೋವಿಡ್ ಬೆಡ್ ಗಳನ್ನು ಸ್ಥಾಪಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಪತಿದಿನ ಆಸ್ಪತ್ರೆಗಳ ಬೆಡ್ ಜಾಸ್ತಿ ಆಗಬೇಕು ಹಾಗೂ ಐಸಿಯು ಬೆಡ್ ಗಳ ಸಂಖ್ಯೆ ಹೆಚ್ಚಾಗಬೇಕು ಎನ್ನುವಂತಹ ಬೇಡಿಕೆಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ, ಹಲವಾರು ವರ್ಷಗಳಿಂದ ಬಳಸದ ಆಸ್ಪತ್ರೆಗಳನ್ನು ಪುನಶ್ಚೇತನಗೊಳಿಸಲು ಪ್ರಾರಂಭಗೊಳಿಸಿದ್ದೇವೆ ಎಂದು ತೇಜಸ್ವಿ ಸೂರ್ಯ ಹೇಳಿದರು. 

 

ಬಿಬಿಎಂಪಿ ಅಧಿಕಾರಿಗಳು, ವೈದ್ಯಕೀಯ ಕ್ಷೇತ್ರದಲ್ಲಿರುವ ಅಧಿಕಾರಿಗಳು ಹಾಗೂ ವೈದ್ಯರು ಮತ್ತು ಇನ್ನಿತರೆ ಸ್ವಯಂಸೇವಕರ ಹತ್ತುದಿನಗಳ ಸತತ ಪ್ರಯತ್ನದಿಂದಾಗಿ 50 ಬೆಡ್ ಗಳ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಈ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಐಸಿಯು ಹಾಗೂ ಕೋರೋಣ ರೋಗಗಳಿಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು ಇನ್ನು ಹೆಚ್ಚಿಸುವ ಆಲೋಚನೆ ಇದೆ ಎಂದು ಹೇಳಿದರು. 

 

ಇನ್ನು ಈ ಆಸ್ಪತ್ರೆಯನ್ನು ಪ್ರಾರಂಭಿಸಲು ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ, ವಿರುದ್ಧ ಪಕ್ಷ ನಾಯಕ ಡಿಕೆ ಸುರೇಶ್ ಕೂಡ ಸಾಥ್ ನೀಡಿದ್ದಾರೆ ಎಂದು ಅವರು ಹೇಳಿದರು. ಈ ಮೂಲಕ ಪಕ್ಷಗಳನ್ನು ಮೀರಿ ಕೋವಿಡ್ ವಿರುದ್ಧ ಹೋರಾಡಬೇಕು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು