News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಅಪಭ್ರಂಶ ಪದ ಬಳಕೆಯಿಂದ ಅಪಾರ್ಥ: ಟಿ.ಎಸ್.ನಾಗಾಭರಣ 

Photo Credit :

ಅಪಭ್ರಂಶ ಪದ ಬಳಕೆಯಿಂದ ಅಪಾರ್ಥ: ಟಿ.ಎಸ್.ನಾಗಾಭರಣ 

ಬೆಂಗಳೂರು: ಇಲಾಖೆಯ ಜಾಲತಾಣದಲ್ಲಿ ಅಪಭ್ರಂಶವಾದ ಕನ್ನಡ ಪದಗಳನ್ನು ಬಳಕೆ ಮಾಡಿರುವುದು ಸಾವಿರಾರು  ವರ್ಷಗಳ ಇತಿಹಾಸವನ್ನು ಹೊಂದಿರುವ ಕಸ್ತೂರಿ ಕನ್ನಡವನ್ನು ಅವಮಾನಿಸಿದಂತಾಗಿದೆ ಎಂದು ಟಿ.ಎಸ್.ನಾಗಾಭರಣ ಹೇಳಿದ್ದಾರೆ.

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ  ಜಾಲಸಂಪರ್ಕ ಸಭೆಯಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರಿಗೆ ನೀಡಿದ ಸೂಚನೆಯಲ್ಲಿ  ಕನ್ನಡ ಪದಗಳು ಅಪಭ್ರಂಶವಾದಾಗ ಅದು ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ.  ಇಷ್ಟು  ಸಣ್ಣ  ಮಾಹಿತಿಯೂ  ಇಲಾಖೆಯ  ಅಧಿಕಾರಿ  ವರ್ಗಕ್ಕೆ  ಇಲ್ಲದಿದ್ದರೆ ಹೇಗೆ?  ಲಕ್ಷಾಂತರ  ಮಂದಿಗೆ  ಮಾಹಿತಿಯನ್ನು ನೀಡಬೇಕಾದ ಇಲಾಖೆಯೇ ತಪ್ಪು ತಪ್ಪಾಗಿ ಕನ್ನಡ  ಬಳಸಿದರೆ ಯಾರಿಗೂ ಸಮರ್ಪಕವಾಗಿ ಅರ್ಥವಾಗುವುದಿಲ್ಲ. ಕೂಡಲೇ ಇದನ್ನು ತಜ್ಞರಿಂದ ಅನುವಾದಿಸಿಕೊಂಡು ಸೂಕ್ತ ರೀತಿಯಲ್ಲಿ ಮಾಹಿತಿಯನ್ನು ಜಾಲತಾಣದಲ್ಲಿ ಪ್ರಕಟಿಸಬೇಕು  ಎಂದು ಹೇಳಿದರು.

ಇಲಾಖೆಯ ಜಾಲತಾಣದಲ್ಲಿ ತಪ್ಪು ತಪ್ಪಾಗಿ ಪ್ರಕಟಿಸಲಾಗಿರುವ ಕನ್ನಡದ  ಮಾಹಿತಿಯನ್ನು ಆನ್ ಲೈನ್ ಮೂಲಕವೇ ಪ್ರದರ್ಶಿಸಿ ನೀವು ಪ್ರಕಟಿಸಲಾಗಿರುವ ಮಾಹಿತಿ ಯಾರಿಗಾದರೂ  ಅರ್ಥವಾಗುತ್ತದೆಯೇ ನೋಡಿ. ಅಲ್ಲದೆ ಪ್ರಾಧಿಕಾರದಿಂದ ಕಳುಹಿಸಲಾದ ಸೂಚನಾ ಪತ್ರದ ಮೇಲೆ ಆಂಗ್ಲ ಭಾಷೆಯ  ಮೊಹರು ಹಾಕಲಾಗಿದೆ. ಕನ್ನಡದ ಮೊಹರು ಇರಲಿಲ್ಲವೇ?  ಬೇಕೆಂದೇ ಈ ಕೆಲಸ ಮಾಡಿದ್ರಾ? ಎಂದು  ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.

ಇಲಾಖೆಯ ಭೂದಾಖಲಾತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕೆಲಸದ ಉಸ್ತುವಾರಿಯನ್ನು ಆಯುಕ್ತರು ಸಮರ್ಪಕವಾಗಿ ನೋಡಿಕೊಳ್ಳಬೇಕು. ಅಲ್ಲದೆ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. ಇದು  ಸರ್ಕಾರದ ಆದೇಶ ಕೂಡ. ಈಗ ನೀವು ಮಾಡಲಾಗಿರುವ ಲೋಪಗಳು ಸರ್ಕಾರದ ಕನ್ನಡ ಭಾಷಾನೀತಿಯನ್ನು  ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿದೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಅಲ್ಲದೆ ಮಾದರಿ ಜಾಲತಾಣವನ್ನು  ರೂಪಿಸಿಕೊಂಡು ಕಾಲಕಾಲಕ್ಕೆ ಪರಿಷ್ಕೃತ ಮಾಹಿತಿಗಳನ್ನು ಒದಗಿಸುವಂತೆ ಸಲಹೆ ನೀಡಿದರು.

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಸೂಕ್ತ ರೀತಿಯಲ್ಲಿ ರೈತರಿಗೆ,  ಜನಸಾಮಾನ್ಯರಿಗೆ ಮಾಹಿತಿ ದೊರೆತಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಬಹುದಾಗಿದೆ. ಕನ್ನಡವನ್ನು ಆಡಳಿತದಲ್ಲಿ ಯಥೇಚ್ಚವಾಗಿ ಬಳಸುವುದು ಎಂದರೆ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆದಂತೆ. ತಮ್ಮ ಇಲಾಖೆಯ ಯಾವುದೇ ಜಾಲತಾಣಕ್ಕೆ ಭೇಟಿ ಕೊಟ್ಟರೂ ಸಹ ಎಲ್ಲ ಮಾಹಿತಿಗಳು ಒಂದೇ ಕಡೆ ಸುಲಭವಾಗಿ ದೊರೆಯುವಂತಾಗಬೇಕು ಎಂದರು.

ಮಾನ್ಯ ಮುಖ್ಯಮಂತ್ರಿಗಳ ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಅವರು ಮಾದರಿ ಜಾಲತಾಣಗಳ  ರೂಪಿಸುವಿಕೆ ಮತ್ತು ನೀತಿ-ನಿರೂಪಣೆ ಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು