News Karnataka Kannada
Thursday, April 18 2024
Cricket
ಬೆಂಗಳೂರು ನಗರ

ಅಡ್ಡಪರಿಣಾಮಗಳಿಲ್ಲದ ಔಷಧರಹಿತ ಚಿಕಿತ್ಸೆ ಅಗತ್ಯ

Loins Club
Photo Credit :

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಲಯನ್ಸ್ ಕ್ಲಬ್ಸ್ ಇಂಟರ್‌ ನ್ಯಾಶನಲ್ ನಿಂದ ಆರೋಗ್ಯ ರಕ್ಷಣೆ ಕುರಿತು ಪ್ರಾದೇಶಿಕ ಸಮ್ಮೇಳನ ನಡೆಯಿತು.

ಲಯನ್ ರಮಣಮೂರ್ತಿ ಬೊಡ್ಡಪಾಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಜಿಂದಾಲ್ ನೇಚರ್ ಕ್ಯೂರ್ ಆಸ್ಪತ್ರೆಯ ಡಾ.ಎಚ್‌.ಪಿ.ಭಾರತಿ ಹಾಗೂ ಡಾ.ಗುರುಪಾದಪ್ಪ ಅವರನ್ನು ಸನ್ಮಾನಿಸಲಾಯಿತು.

ಜಿಂದಾಲ್ ನೇಚರ್ ಕ್ಯೂರ್‌ನ ಡಾ ಭಾರತಿ ಮತ್ತು ನೇಚರ್ ಕ್ಯೂರ್ ಆಸ್ಪತ್ರೆಯ ಡಾ ಗುರುಪಾದಪ್ಪ ಅವರು ಆರೋಗ್ಯ ಕಾಪಾಡುವ ವಿಧಾನಗಳ ಬಗ್ಗೆ ಬೆಳಕು ಚೆಲ್ಲಿದರು. ಆರೋಗ್ಯಕರ ಮತ್ತು ಸಂತೋಷದಾಯಕ ಜೀವನಕ್ಕಾಗಿ ಪೌಷ್ಟಿಕ ಆಹಾರ ಮತ್ತು ಪ್ರಕೃತಿ ಚಿಕಿತ್ಸೆ ಅಗತ್ಯವಾಗಿದೆ. ಅಡ್ಡ ಪರಿಣಾಮಗಳಿಲ್ಲದ ಔಷಧರಹಿತ ಚಿಕಿತ್ಸೆ ಮತ್ತು ಅನೇಕ ದೀರ್ಘಕಾಲದ ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ರಕ್ಷಣೆ ಪಡೆಯಲು ಸೂಕ್ತ ಕಾರ್ಯತಂತ್ರ ಅನುಸರಿಸಬೇಕು ಎಂದು ಹೇಳಿದರು.

ಚೈತನ್ಯ ಮತ್ತು ಯೋಗಕ್ಷೇಮವನ್ನು ತಮ್ಮಲ್ಲಿಯೇ ಉತ್ತೇಜಿಸಿಕೊಳ್ಳುವ ಕುರಿತು ಹೆಚ್ಚಿನ ಗಮನಹರಿಸಬೇಕು. ಮದ್ಯಪಾನದಂತಹ ದುರಭ್ಯಾಸಗಗಳಿಂದ ದೂರ ಇರಬೇಕು. ವ್ಯಾಯಾಮ, ನಿದ್ರೆ ಮತ್ತು ಉಪವಾಸವು ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕೆ ಸಹಾಯ ಮಾಡುತ್ತವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು