ನೆಲಮಂಗಲ : ಇಲ್ಲಿನ ಡಾಬಸ್ ಪೇಟೆಯ ಕೋಮರ್ಲ ಗ್ರೂಪ್ ಆಫ್ ಕಂಪನಿ ಮೇಲೆ ಶುಕ್ರವಾರ ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
15 ಜನರ ಅಧಿಕಾರಿಗಳ ನೇತೃತ್ವದಲ್ಲಿ ಏಕಕಾಲದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಕಚೇರಿ, ದೊಡ್ಡಬಳ್ಳಾಪುರದ ರಾಮೇಶ್ವರ ಗ್ರಾಮ ಕಂಪನಿ, ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಕೋಮಲ ಗ್ರೂಪ್ ಫೀಡ್ ಫ್ಯಾಕ್ಟರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.