ಬೆಂಗಳೂರು

ಬೆಂಗಳೂರು: ಚುನಾವಣಾ ಅಕ್ರಮ, 278 ಕೋ. ರೂ. ನಗ-ನಗದು,ಸೊತ್ತು ಜಪ್ತಿ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 80.23 ಕೋಟಿ ರೂ. ನಗದು, 19.31 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳು, 73.80 ಕೋಟಿ ರು. ಮೌಲ್ಯದ 145.55 ಕೆ.ಜಿ. ಚಿನ್ನ ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 245.76 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಅಕ್ರಮಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿರುವ ಚುನಾವಣಾ ಆಯೋಗ ಶುಕ್ರವಾರ 72.30 ಲಕ್ಷ ರು. ನಗದು ವಶಪಡಿಸಿಕೊಂಡಿದೆ. ನಿಪ್ಪಾಣಿ ಕ್ಷೇತ್ರದಲ್ಲಿ 25 ಲಕ್ಷ ರು. ಮೌಲ್ಯದ 23,880 ಲೀಟರ್‌ ಮದ್ಯವನ್ನು ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ 58.59 ಲಕ್ಷ ರು. ಮೌಲ್ಯದ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ 25 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ ಚುನಾವಣಾ ಆಯೋಗ ತಿಳಿಸಿದೆ.
52.23 ಕೋಟಿ ರೂ. ಮೌಲ್ಯದ 13.94 ಲಕ್ಷ ಲೀಟರ್‌ ಮದ್ಯ, 16.10 ಕೋಟಿ ರೂ. ಮೌಲ್ಯದ 1,084.03 ಕೆ.ಜಿ. ಮಾದಕ ವಸ್ತುಗಳು,77.87 ಕೋಟಿ ರೂ. ಮೌಲ್ಯದ 727.45 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

1,795 ಎಫ್‌ಐಆರ್‌ ದಾಖಲಿಸಲಾಗಿದೆ. 69,656 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 4,529 ಪ್ರಕರಣಗಳನ್ನು ದಾಖಲಿಸಲಾಗಿದೆ. 7,238 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 12,107 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದಿದೆ.

Ashika S

Recent Posts

ಸ್ಲೊವಾಕಿಯಾ ಪ್ರಧಾನ ಮಂತ್ರಿಗೆ ಗುಂಡೇಟು : ಶಂಕಿತ ಅರೆಸ್ಟ್

ಅಮೆರಿಕ ವಿರೋಧಿ ನಿಲುವುಗಳನ್ನು ಹೊಂದಿರುವ ತೀವ್ರ ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ ಹತ್ಯೆ ಯತ್ನಬುಧವಾರ ನಡೆದಿದೆ.…

4 mins ago

49 ಅಭ್ಯರ್ಥಿಗಳಿಂದ ಉಮೇದುವಾರಿಕೆ : ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನ.…

21 mins ago

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ…

44 mins ago

ನೀವು ತಡರಾತ್ರಿ ವರೆಗೆ ಎಚ್ಚರ ಇರುತ್ತೀರಾ? ಇದರ ಸಮಸ್ಯೆಗಳೇನು ಗೊತ್ತೇ?

ತಡರಾತ್ರಿ ಇಲ್ಲ ಮುಂಜಾವರೆಗೂ ಕೆಲವರು ನಿದ್ದೆ ಗೆಡುತ್ತಾರೆ ಇದೊಂದು ಈಗಿನ ಜಯಮಾನದ ಸಾಮಾನ್ಯ ಅಭ್ಯಾಸವಾಗಿದೆ.ಕೆಲಸದ ಒತ್ತಡ, ಕಚೇರಿಯ ಕೆಲಸಗಳು, ಸಾಮಾಜಿಕ…

1 hour ago

ಮೋದಿ ವಿರುದ್ಧ ಸ್ಪರ್ಧಗೆ ಮುಂದಾಗಿದ್ದ ಕಾಮೆಡಿಯನ್‌ ಶ್ಯಾಮ್ ನಾಮಪತ್ರ  ರಿಜೆಕ್ಟ್‌!

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಟ್ಯಾಂಡಪ್‌ ಕಾಮಿಡಿಯನ್‌ ಶ್ಯಾಮ್ ರಂಗೀಲಾ ಅವರ ನಾಮಪತ್ರ…

1 hour ago

ಪ್ಯಾಶನ್ ಫ್ರೂಟ್: ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು?

ಈ ಹಣ್ಣು ಹುಳಿ ರುಚಿಯನ್ನು ಹೊಂದಿದ್ದರೂ ಆರೋಗ್ಯ ವಿಚಾರದಲ್ಲಿ ಸಿಹಿ ಗುಣಗಳನ್ನು ಹೊಂದಿದೆ. ಇದನ್ನು ಬೆಳೆಯಲು ಉಷ್ಣ ವಲಯ ಅತ್ಯುತ್ತಮ.…

2 hours ago