ಬೆಂಗಳೂರು: ಗ್ಯಾರಂಟಿ ಯೋಜನೆಗಳ ಕುರಿತು ಚರ್ಚೆ ನಡೆಸಲು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಆರ್ಥಿಕ ಇಲಾಖೆ ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ತಗಲುವ ಖರ್ಚು-ವೆಚ್ಚದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರ ಮುಂದೆ ನೀಲನಕ್ಷೆ ಇಟ್ಟಿದ್ದಾರೆ.
ಯಾವ ಹಂತದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದು ಸೂಕ್ತ, ತಕ್ಷಣ ಅನುಷ್ಠಾನವಾದರೇ ಆಗಬಹುದಾದ ವೆಚ್ಚದ ವಿವರ ನೀಡುತ್ತಿದ್ದಾರೆ.