Ad

ಇಂಧನ ಬಳಿಕ ಮತ್ತೊಂದು ಬೆಲೆ ಏರಿಕೆ ಶಾಕ್ ಕೊಡೋದಕ್ಕೆ ಸಜ್ಜಾಯ್ತು ಸರ್ಕಾರ !

Water

ಬೆಂಗಳೂರು: ಪೆಟ್ರೋಲ್, ಡಿಸೇಲ್‌ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು‌ ಶಾಕ್ ಎದುರಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಆರ್ಥಿಕ ನಷ್ಟದಲ್ಲಿ ನಡೆಯುತ್ತಿರುವುದರಿಂದ ಮಾಸಿಕ ನೀರಿನ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆಯ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಸುಳಿವು ನೀಡಿದ್ದಾರೆ.

Ad
300x250 2

ನಗರದಲ್ಲಿ ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ‌ ದರ‌ ಏರಿಕೆ ಆಗಿಲ್ಲ‌. ಹೀಗಾಗಿ ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳಿಗೆ ವೇತನ ನೀಡಲು ಸಮಸ್ಯೆ ಆಗುತ್ತಿದೆ. ಅಲ್ಲದೇ, ನೀರಿನ ಬಳಕೆಯ ವಿದ್ಯುತ್ ವೆಚ್ಚ ಸಹ ಪಾವತಿಸಲು ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ‌ ಅನಿವಾರ್ಯ ಅಂತ ಪರೋಕ್ಷವಾಗಿ ನೀರಿನ ದರ ಏರಿಕೆ ಸುಳಿವನ್ನು ಡಿಸಿಎಂ ಕೊಟ್ಟಿದ್ದಾರೆ.

ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯವಿದೆ. ಆದರೆ ಈಗಾಗಲೇ 400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1000 ರೂಪಾಯಿ ಆಗಿದೆ. 75 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿ ಆಗಿದೆ. ಇದರ ನಡುವೆ ನೀರಿನ ದರವನ್ನು ಹೆಚ್ಚಿಸಬೇಕೇ ಅಥವಾ ಬೇಡವೇ ಎಂದು ಡಿಸಿಎಂ ಪ್ರಶ್ನಿಸಿದ್ದರು.

ಕಳೆದ ವರ್ಷವೇ ವಾಸದ ಮನೆಗಳ ನೀರಿನ ದರದಲ್ಲಿ ಶೇಕಡಾ 10 ಹೆಚ್ಚಳ ಹಾಗೂ ವಾಣಿಜ್ಯ ಸಂಸ್ಥೆಗಳ ನೀರಿನ ದರದಲ್ಲಿ ಶೇಕಡಾ 15ರಷ್ಟು ಹೆಚ್ಚಳ ಮಾಡಲು ಬಿಬಿಎಂಪಿ ಸರ್ಕಾರಕ್ಕೆ ವರದಿ ಮಾಡಿತ್ತು. ಏಕೆಂದರೆ ವಿದ್ಯುತ್ ದರ ಪರಿಷ್ಕರಣೆ ನಂತರ ಬಿಡಬ್ಲ್ಯೂ ಎಸ್ ಎಸ್ ಬಿ ನೀರಿನ ವೆಚ್ಚ 110 ಕೋಟಿಯಿಂದ 125 ಕೋಟಿ ರೂಪಾಯಿಗೆ ಹೆಚ್ಚಳವಾಗಿತ್ತು.

ಆದರೆ ಈ ಬಾರಿ ಶೇಕಡಾ 40 ರಷ್ಟು ನೀರಿನ ದರವನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರೊಂದಿಗೆ ಬೆಂಗಳೂರಿನ ನಿವಾಸಿಗಳಿಗೆ ಕಾವೇರಿ ನೀರಿನ ಪೂರೈಕೆ ಹೆಚ್ಚುವರಿ ಹಣ ಪಾವತಿ ಮಾಡಬೇಕಿರೋದು ಖಚಿತವಾಗುತ್ತಿದೆ.

Ad
Ad
Nk Channel Final 21 09 2023
Ad