ಬೆಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಸ್‌ಡಿಪಿಐ ನಲ್ಲಿ ಸಕ್ರಿಯ

ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿದ್ದ ಮತೀಯ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)   ನಿಷೇಧ ಬಳಿಕ ಅದರ ಸದಸ್ಯರು ಎಸ್‌ಡಿಪಿಐ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯೊಂದು ಹೇಳಿದೆ.

ಭದ್ರತೆ ಮತ್ತು ಭಯೋತ್ಪಾದಕ ಸಂಬಂಧಗಳಿಗೆ ಬೆದರಿಕೆಗಳ ಮೇಲೆ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಮತ್ತು ಅದರ ಎಂಟು ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ.  ಪಿಎಫ್‌ಐ ಕಾರ್ಯಕರ್ತರನ್ನು ಆನ್‌ಲೈನ್‌ನಲ್ಲಿ ಪುನಃ ಒಟ್ಟುಗೂಡಿದ್ದು  ಅವರಲ್ಲಿ ಅನೇಕರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗೆ ಸೇರಿಕೊಳ್ಳುತ್ತಿದ್ದಾರೆ .

ನಿಷೇಧಕ್ಕೆ ಮೊದಲು  ಮೂರು ವರ್ಷಗಳ ಕಾಲ ಪಿಎಫ್‌ಐನ ಅಧ್ಯಕ್ಷರಾಗಿದ್ದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಈ ಬಗ್ಗೆ ವಿವರ ನೀಡಿದ್ದು ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮೇಲೆ ತಮ್ಮ ಅಭಿಪ್ರಾಯ ಪ್ರಭಾವ ಬೀರಲು ವಾಟ್ಸಾಪ್‌ನಲ್ಲಿ ವೀಡಿಯೊ ಕ್ಲಿಪ್‌ ಗಳನ್ನು ಹರಿಬಿಡುವ ಮೂಲಕ ಮತದಾರರನ್ನು ಪ್ರಭಾವ ಒಡ್ಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

“ನಾವು,ನಮ್ಮ ಸದಸ್ಯರು ಮತ್ತು ಕಾರ್ಯಕರ್ತರು ಮತ್ತು ನಮ್ಮ ಹಿತೈಷಿಗಳು  ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ನಾವು ನಿರಂತರವಾಗಿ ಚರ್ಚೆ ನಡೆಸುತ್ತೇವೆ. ಚುನಾವಣೆಯಲ್ಲಿ ನಾವು ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ನಾವು ವಿಚಾರಿಸುತ್ತೇವೆ. ನಾವು ಬಿಜೆಪಿ ವಿರುದ್ಧ ಸಮರ ಸಾರಿದ್ದೇವೆ. ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕೆಂಬುದೇ ನಮ್ಮ ಗುರಿ ಎಂದು ಒಪ್ಪಿಕೊಂಡರು.

ಪಾಷಾ ಪ್ರಕಾರ ಪಿಎಫ್‌ಐ ನೆಟ್‌ವರ್ಕ್, ಸ್ಥಳೀಯ ಮಸೀದಿಗಳ ಅಧ್ಯಕ್ಷರು ಮತ್ತು ವಾಟ್ಸ್‌ ಅಪ್‌ ಸಂದೇಶ ಕಳುಹಿಸುವ ಗುಂಪು  ಸಮನ್ವಯದಲ್ಲಿ ಕೆಲಸ ಮಾಡುತ್ತದೆ.

“ನಾವು ವಾಟ್ಸಾಪ್‌ನಲ್ಲಿ ಒಂದೇ ವೀಡಿಯೊವನ್ನು ಬಿಡುಗಡೆ ಮಾಡಿದಾಗ, ಅದನ್ನು ಸಾವಿರಾರು ಜನರು ವೀಕ್ಷಿಸುತ್ತಾರೆ. ನಾವು ಎಲ್ಲ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕಾಗಿಲ್ಲ” ಎಂದು ಅವರು ವಿವರಿಸಿದರು, “ಈ ಪ್ರದೇಶದಲ್ಲಿ 30-50 ಮಸೀದಿಗಳಿವೆ. ಹತ್ತು ಮಸೀದಿಗಳ ಅಧ್ಯಕ್ಷರು ತಲಾ 10-15 ವಾಟ್ಸ್‌ ಅಪ್‌ ಗುಂಪುಗಳನ್ನು ರಚಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿಎಫ್‌ಐನ ಶೇಕಡಾ 70 ರಿಂದ 80 ರಷ್ಟು ಸದಸ್ಯತ್ವ ಇನ್ನೂ ಹಾಗೇ ಇದೆ ಎಂದು ಪಾಷಾ ಒಪ್ಪಿಕೊಂಡಿದ್ದಾರೆ.  ಈ ಗುಂಪು ಎಸ್‌ಡಿಪಿಐಗೆ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಉಸ್ತುವಾರಿ ಆಸಿಫ್, ಪಿಎಫ್‌ಐ ಕಾರ್ಯಕರ್ತರನ್ನು ಎಸ್‌ಡಿಪಿಐ ಪಕ್ಷಕ್ಕೆ ವಿಲೀನಗೊಳಿಸಲಾಗಿದೆ ಎಂಬ ಪಾಷಾ ಅವರ ಹೇಳಿಕೆಗಳನ್ನು ದೃಢಪಡಿಸಿದ್ದಾರೆ.

Ashika S

Recent Posts

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

11 mins ago

ರೀಲ್ಸ್ ಸ್ಟಾರ್ ಗೀತಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಎನಿಸಿದ್ದ ಗೀತಾಶ್ರೀ ಶವ ಅವರ ಮನೆಯಲ್ಲೇ…

29 mins ago

ಚುನಾವಣಾ ಪ್ರಚಾರದ ಹಕ್ಕು “ಮೂಲಭೂತವಲ್ಲ”: ಕೇಜ್ರಿವಾಲ್ ಜಾಮೀನಿಗೆ ಇಡಿ ಆಕ್ಷೇಪ

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಗುರುವಾರ ವಿರೋಧಿಸಿದೆ.

41 mins ago

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

2 hours ago

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

2 hours ago

ಪ್ರಜ್ವಲ್ ಪೆನ್‍ಡ್ರೈವ್ ಕೇಸ್; ಸಂತ್ರಸ್ತೆಗೆ ಮೂವರಿಂದ ಬೆದರಿಕೆ

ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…

2 hours ago