ಬೆಂಗಳೂರು: ಫೆ.15ರಿಂದ ಯಾತ್ರೆ ಮೂಲಕ ಪ್ರಚಾರ ಆರಂಭಿಸಲಿರುವ ಎಎಪಿ

ಬೆಂಗಳೂರು: ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವು ಫೆ.15ರಂದು ‘ಪೊರಕೆಯೇ ಪರಿಹಾರ’ ಎಂಬ ಯಾತ್ರೆಯೊಂದಿಗೆ ಚುನಾವಣಾ ಪ್ರಚಾರ ಆರಂಭಿಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಾಸರಿ, “ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗದಿಂದ ಯಾತ್ರೆ ಪ್ರಾರಂಭವಾಗಲಿದೆ.

ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ್ ರಾವ್ ವೃತ್ತದ ಮೂಲಕ ಫ್ರೀಡಂ ಪಾರ್ಕ್ ತಲುಪಿ ಅಲ್ಲಿ ಸಭೆ ನಡೆಸಲಿದ್ದೇವೆ. ಸ್ವಚ್ಛತೆ, ಶಿಕ್ಷಣ, ಆರೋಗ್ಯ, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಏಕೈಕ ಪರಿಹಾರವಾಗಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ‘ಪೊರಕೆ ಪರಿಹಾರ’ ಹೆಸರಿನಲ್ಲಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ” ಎಂದು ಅವರು ಹೇಳಿದರು.

ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ.ಸತೀಶ್ ಕುಮಾರ್ ಮಾತನಾಡಿ, ಫೆ.15ರಂದು ನಡೆಯಲಿರುವ ಈ ಯಾತ್ರೆಯಲ್ಲಿ ರಾಜ್ಯ ಮತ್ತು ನಗರ ಮಟ್ಟದ ಪಕ್ಷದ ಪದಾಧಿಕಾರಿಗಳು, ಆಕಾಂಕ್ಷಿಗಳು, ಕಾರ್ಯಕರ್ತರು ಮತ್ತು ಬೆಂಬಲಿಗರು ಭಾಗವಹಿಸಲಿದ್ದಾರೆ.

“ಕರ್ನಾಟಕದ ಜನರು, ವಿಶೇಷವಾಗಿ ಬೆಂಗಳೂರಿನ ಜನರು ರಾಜ್ಯವನ್ನು ಆಳಿದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಬೇಸತ್ತಿದ್ದಾರೆ. ಜ್ವಲಂತ ಸಮಸ್ಯೆಗಳಿಗೆ ಎಎಪಿಯೊಂದೇ ಪರಿಹಾರ ಎಂದು ಅವರಿಗೆ ಮನವರಿಕೆಯಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ನೀಡುತ್ತಿರುವ ಜನಪರ ಆಡಳಿತವನ್ನು ಕರ್ನಾಟಕದ ಜನರು ನೋಡಲು ಬಯಸುತ್ತಾರೆ” ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ ಉಪಸ್ಥಿತರಿದ್ದರು.

Ashika S

Recent Posts

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

4 mins ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

11 mins ago

ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಂಪ್ಯದಲ್ಲಿ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ…

21 mins ago

100ರ ಮುಖ ಬೆಲೆಯ ಹಳೆ ಮಾದರಿ ನೋಟು ರದ್ದಾಗದಿದ್ದರೂ ಚಲಾವಣೆಗೆ ಹಿಂದೇಟು

ತಾಲ್ಲೂಕಿನಲ್ಲಿ ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಹಾಗೂ ₹10…

30 mins ago

ಇಂದಿನ ಆರ್​​​ಸಿಬಿ, ಪಂಜಾಬ್​​ ನಡುವಿನ ಐಪಿಎಲ್​​ ಪಂದ್ಯ ರದ್ದು?

ಕಳೆದ ಮೂರು ದಿನಗಳಿಂದ ಇಡೀ ದೇಶಾದ್ಯಂತ ಭಾರೀ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲೂ ಗುಡುಗು ಸಮೇತ ಮಳೆ ಸುರಿಯುತ್ತಿದೆ. ಇಷ್ಟೇ ಅಲ್ಲ…

31 mins ago

ಎಸ್​ಎಸ್​ಎಲ್​ಸಿ ಫಲಿತಾಂಶ: ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ. 

44 mins ago