Bengaluru 26°C
Ad

ಬೆಂಗಳೂರು ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಡೆವಲಪ್ ಮೆಂಟ್ ಪ್ರೋಗ್ರಾಮ್ (ಎಫ್‌ಡಿಪಿ)

“ಹೆಲ್ತ್’ಕೇರ್’ನಲ್ಲಿ ಕೃತಕ ಬುದ್ಧಿಮತ್ತೆ ಪರಿಹಾರಗಳು" ವಿಷಯದ ಫ್ಯಾಕಲ್ಟಿ ಡೆವಲಪ್’ಮೆಂಟ್ ಪ್ರೋಗ್ರಾಮ್ (ಎಫ್‌ಡಿಪಿ) 2024, ನವೆಂಬರ್ 4 ರಿಂದ 9 ರವರೆಗೆ ಬೆಂಗಳೂರಿನ ಸೈಂಟ್ ವಿಶ್ವವಿದ್ಯಾಲಯದಲ್ಲಿ ನಡೆಯಿತು.

ಬೆಂಗಳೂರು: “ಹೆಲ್ತ್’ಕೇರ್’ನಲ್ಲಿ ಕೃತಕ ಬುದ್ಧಿಮತ್ತೆ ಪರಿಹಾರಗಳು” ವಿಷಯದ ಫ್ಯಾಕಲ್ಟಿ ಡೆವಲಪ್’ಮೆಂಟ್ ಪ್ರೋಗ್ರಾಮ್ (ಎಫ್‌ಡಿಪಿ) 2024, ನವೆಂಬರ್ 4 ರಿಂದ 9 ರವರೆಗೆ ಬೆಂಗಳೂರಿನ ಸೈಂಟ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ 40 ಜನರು ಪಾಲ್ಗೊಂಡಿದ್ದರು.

Ad

ಉದ್ಘಾಟನಾ ಸಮಾರಂಭದಲ್ಲಿ ಐಐಎಸ್‌ಸಿ ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಧರನ್ ದೇವರಾಜನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಡಾ. ರೊನಾಲ್ಡ್ ಮಸ್ಕರೇನ್ಹಸ್ , ಪ್ರೊ ವೈಸ್-ಚಾನ್ಸಲರ್; ಡಾ. ರೆಜಿನಾ ಮಥಾಯಸ್, ಪ್ರೊ ವೈಸ್-ಚಾನ್ಸಲರ್; ಪ್ರೊ. ಡಾ. ಮೆಲ್ವಿನ್ ಕೊಲಾಸೊ, ರಿಜಿಸ್ಟ್ರಾರ್; ಫಾ. ಡೆನ್ಜಿಲ್ ಲೋಬೊ, ಎಸ್‌ಜೆ, ಐಟಿ ಶಾಲೆಯ ಡೀನ್ ಮತ್ತು ಡಾ. ಶಿವಕಣ್ಣನ್ ಎಸ್, ಎಫ್‌ಡಿಪಿ ಸಂಯೋಜಕರು ಭಾಗವಹಿಸಿದ್ದರು.

Ad

ಅ (1)

ಫಾ. ಡೆನ್ಜಿಲ್ ಲೋಬೊ ತಮ್ಮ ಭಾಷಣದಲ್ಲಿ ಕೃತಕ ಬುದ್ಧಿಮತ್ತೆ ಅನೇಕ ಕ್ಷೇತ್ರಗಳಲ್ಲಿ ಹೇಗೆ ಅನ್ವಯಿಸುತ್ತಿದೆ, ಇದು ಕೇವಲ ಉದ್ಯಮಗಳನ್ನು ಪರಿವರ್ತಿಸುವುದು ಮಾತ್ರವಲ್ಲದೆ ವೈದ್ಯಕೀಯ ಮತ್ತು ರೋಗಿ ಆರೈಕೆಯ ದೃಷ್ಟಿಕೋನವನ್ನು ಸಹ ಕ್ರಾಂತಿಕಾರಿಯಾಗಿ ಬದಲಾಯಿಸಿದೆ ಎಂಬುದನ್ನು ವಿವರಿಸಿದರು.

Ad

ಡಾ. ಮೆಲ್ವಿನ್ ಕೊಲಾಸೊ, ಎಫ್‌ಡಿಪಿ ಏರ್ಪಡಿಸಿರುವುದಕ್ಕಾಗಿ ಧನ್ಯವಾದಗಳನ್ನು ತಿಳಿಸಿ, ಭಾಗವಹಿಸುವವರಿಗೆ ಶುಭಾಶಯಗಳು ಕೋರಿದರು. ಡಾ. ಆ್ಯನಿ ಸಿರಿಯನ್ ಅವರು ಧನ್ಯವಾದಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮವು ಬ್ರೈನ್ ಕಂಪ್ಯೂಟೇಶನ್, ಬಯೋಇನ್‌ಫರ್ಮ್ಯಾಟಿಕ್ಸ್‌ನಲ್ಲಿನ AI, ವೈದ್ಯಕೀಯ ಚಿತ್ರಣ ವಿಶ್ಲೇಷಣೆ, ಕ್ಲಿನಿಕಲ್ ಮೆಷಿನ್ ಲರ್ನಿಂಗ್ ಮತ್ತು ಸ್ಮಾರ್ಟರ್ ಹೆಲ್ತ್‌ಕೇರ್ ಪರಿಹಾರಗಳಂತಹ ವಿಷಯಗಳ ಕುರಿತು ಅನೇಕ ಸೆಷನ್‌ಗಳನ್ನು ಒಳಗೊಂಡಿತ್ತು, ಇದನ್ನು ಐಐಎಸ್’ಸಿ ಬೆಂಗಳೂರು, ಐಐಟಿ ತಿರುಪತಿ ಮತ್ತು ವಿಐಟಿ ವೆಲ್ಲೂರ್‌ನಂತಹ ಪ್ರಮುಖ ಸಂಸ್ಥೆಗಳ ತಜ್ಞರಿಂದ ಸೆಶನ್’ಗಳು ನಡೆದವು.

Ad

ಅ (2)

ಡಾ. ಶಿವಕಣ್ಣನ್ ಎಸ್ ನೇತೃತ್ವದಲ್ಲಿ ನಡೆದ ಈ ತರಬೇತಿಯಲ್ಲಿ ಪಾಲುದಾರರಿಗೆ ಬೆಂಗಳೂರಿನ ಸೈಂಟ್ ಫಿಲೋಮೆನಾಸ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಎಐ ಅನ್ವಯಿಕೆಯನ್ನು ಗಮನಿಸುವ ಅವಕಾಶವನ್ನು ಏರ್ಪಡಿಸಿತ್ತು.

Ad

ಕಾರ್ಯಕ್ರಮವು ಡಾ. ಶಿವಕಣ್ಣನ್ ಎಸ್. ಇವರು ಎಫ್‌ಡಿಪಿ ವರದಿಯನ್ನು ಮಂಡಿಸುವ ಮೂಲಕ ಕೊನೆಗೊಂಡಿತು. ಡಾ. ಆ್ಯನಿ ಸಿರಿಯನ್ ಅವರು ಧನ್ಯವಾದಗಳನ್ನು ಸಲ್ಲಿಸಿ, ಎಫ್‌ಡಿಪಿಯ ಯಶಸ್ಸಿಗೆ ಕೊಡುಗೆಯಾದ ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದರು.

Ad
Ad
Ad
Nk Channel Final 21 09 2023