ಬೆಂಗಳೂರು: ಭಾರೀ ಭೂಕುಸಿತದಿಂದ ಹಾನಿಗೀಡಾಗಿದ್ದ ಕಡಗರವಳ್ಳಿ ಹಾಗೂ ಯೆಡಕುಮೇರಿ ರೈಲು ಹಳಿ ದುರಸ್ಥಿ ಕಾರ್ಯ ಪೂರ್ಣಗೊಂಡ 4 ದಿನದ ಬಳಿಕ ಪ್ರಯಾಣಿಕ ರೈಲಿನ ಓಡಾಟ ಆರಂಭಿಸಲಾಗಿದೆ. ಇಂದು ಮಧ್ಯಾಹ್ನ 12.37ಕ್ಕೆ ಯಶವಂತಪುರ-ಮಂಗಳೂರು ಜಂಕ್ಷನ್ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಯಶಸ್ವಿಯಾಗಿ ದುರಸ್ಥಿಗೊಂಡ ಹಳಿಯ ಮೇಲೆ ಸಾಗಿತು.
ರೈಲು ಮಾರ್ಗ ಸಂಚಾರ ಬಂದ್ ಆಗಿದ್ದರಿಂದ ಇತ್ತ ಖಾಸಗಿ ಬಸ್ ಹಾಗೂ ವಿಮಾನ ದರವೂ ಏರಿಕೆ ಆಗಿದ್ದು, ಪ್ರಯಾಣಿಕರು ಸಂಕಷ್ಟಪಡುವಂತಾಗಿತ್ತು. ಇದೀಗ ಇಂದು (ಆಗಸ್ಟ್ 8) ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಸಂಚರಿಸುವ ರೈಲು ಯಶಸ್ವಿಯಾಗಿ ಕಡಗರವಳ್ಳಿ ಹಾಗೂ ಯೆಡಕುಮೇರಿ ದಾಟಿ ಮಂಗಳೂರು ಜಂಕ್ಷನ್ ತಲುಪಿತು. ಸದ್ಯ 15 ಕಿಲೋ ಮೀಟರ್ ವೇಗಮಿತಿಯಲ್ಲಿ ರೈಲಿನ ಓಡಾಟ ನಡೆಸಲಾಗಿದೆ.
Ad