Bengaluru 22°C
Ad

ಬೆಂಗಳೂರು ಮಹಾಲಕ್ಷ್ಮಿ ಹತ್ಯೆ ಪ್ರಕರಣ : ಮತ್ತೊಂದು ಸ್ಪೋಟಕ ವಿಚಾರ ಬಯಲಿಗೆ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆದ  ಮಹಾಲಕ್ಷ್ಮಿ ಕೊಲೆಯ  ಆರೋಪಿ ಸತ್ತು 2 ದಿನಗಳೇ ಆಗಿವೆ. ಆದ್ರೆ, ಮಹಾಲಕ್ಷ್ಮಿ ಕೊಲೆ ಸುತ್ತಲೂ ಹತ್ತಾರು ಅನುಮಾಗಳು ಹಾಗೆ ಉಳಿದುಕೊಂಡಿವೆ. ಸದ್ಯ ಪೊಲೀಸರು ತನಿಖೆಯಲ್ಲಿ ಹತ್ಯೆಯ ಒಂದೊಂದೆ ವಿಚಾರ ಬಯಲಾಗುತ್ತಿದೆ. ಅದರಲ್ಲೂ ಆರೋಪಿ ರಂಜನ್ ಕೊಲೆ ನಡೆದ ಸೆ.2ರಂದು ಬೆಂಗಳೂರು ತೊರೆದು ಬೈಕ್​ನಲ್ಲೇ ಊರು(ಒಡಿಸಾ) ತಲುಪಿ ಆತ್ಮಹತ್ಯೆಗೆ ಶರಣಾಗಿದ್ದ.

ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆದ  ಮಹಾಲಕ್ಷ್ಮಿ ಕೊಲೆಯ  ಆರೋಪಿ ಸತ್ತು 2 ದಿನಗಳೇ ಆಗಿವೆ. ಆದ್ರೆ, ಮಹಾಲಕ್ಷ್ಮಿ ಕೊಲೆ ಸುತ್ತಲೂ ಹತ್ತಾರು ಅನುಮಾಗಳು ಹಾಗೆ ಉಳಿದುಕೊಂಡಿವೆ. ಸದ್ಯ ಪೊಲೀಸರು ತನಿಖೆಯಲ್ಲಿ ಹತ್ಯೆಯ ಒಂದೊಂದೆ ವಿಚಾರ ಬಯಲಾಗುತ್ತಿದೆ. ಅದರಲ್ಲೂ ಆರೋಪಿ ರಂಜನ್ ಕೊಲೆ ನಡೆದ ಸೆ.2ರಂದು ಬೆಂಗಳೂರು ತೊರೆದು ಬೈಕ್​ನಲ್ಲೇ ಊರು(ಒಡಿಸಾ) ತಲುಪಿ ಆತ್ಮಹತ್ಯೆಗೆ ಶರಣಾಗಿದ್ದ.

ಹೌದು, ಕೊಲೆ ಮಾಡಿದ ಬಳಿಕ ಹೆಬ್ಬಗೋಡಿಯ ಸಹೋದರನ ರೂಂಗೆ ಹೋಗಿದ್ದ ಆರೋಪಿ, ಸಹೋದರನ ಬಳಿ ಎಲ್ಲಾ ವಿಚಾರವನ್ನ ಹೇಳಿ, ನೀನು ರೂಂ ಖಾಲಿ ಮಾಡು ಎಂದಿದ್ದ. ಬಳಿಕ ತನ್ನ ಬಜಾಜ್ ಪ್ಲಾಟಿನಂ ಬೈಕ್​ನಲ್ಲಿ ಆಂಧ್ರ, ಪ.ಬಂಗಾಳ ಮೂಲಕ ಸುಮಾರು ಎರಡೂವರೆ ದಿನ 1500 ಕಿ.ಮೀ ಸಂಚರಿಸಿ ಒಡಿಸಾದ ಬೋನಿಪುರ ತಲುಪಿ, ಮನೆಗೆ ತಲುಪಿ ತನ್ನ ತಾಯಿಗೂ ಎಲ್ಲಾ ವಿಚಾರ ತಿಳಿಸಿದ್ದ.

ಹೀಗೆ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡು ಮಾಡಿ ಫ್ರಿಡ್ಜ್​ನಲ್ಲಿ ಇಟ್ಟಿದ್ದ ರಂಜನ್, ಬಳಿಕ ಬೈಕ್​ನಲ್ಲೇ ಊರು ತಲುಪಿದ್ದ. ಆದ್ರೆ, ಬಂಧನದ ಭೀತಿಯಿಂದ ಡೆತ್ ನೋಟ್ ಬರೆದು ಪ್ರಾಣತ್ಯಾಗ ಮಾಡಿದ್ದಾನೆ. ಸದ್ಯ ಬೆಂಗಳೂರು ಪೊಲೀಸರು ರಂಜನ್ ಊರಿನಲ್ಲಿ ಆತನ ಮರಣೋತ್ತರ ಪರೀಕ್ಷಾ ವರದಿ, ಮೊಬೈಲ್, ಫಿಂಗರ್ ಪ್ರಿಂಟ್, ಫ್ಯಾಮಿಲಿಯವರ ಹೇಳಿಕೆ ಪಡೆದು ವಾಪಸ್ ಆಗಲಿದ್ದಾರೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿದ್ದ ರಂಜನ್ ಸಹೋದರನ ವಿಚಾರಣೆ ನಡೆಸಿರುವ ಪೊಲೀಸರು, ಪ್ರಕರಣದ ಸಂಬಂಧ ಆತನಿಂದ ನ್ಯಾಯಾಧೀಶರ ಮುಂದೆ ಸೆಕ್ಷನ್​.164 ಅಡಿ ಹೇಳಿಕೆ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Ad
Ad
Nk Channel Final 21 09 2023