Bengaluru 22°C
Ad

ಇಂದು ದರ್ಶನ್​​ ಸೇರಿ 5 ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ದರ್ಶನ್, ಪವಿತ್ರಗೌಡ, ವಿನಯ್ ಸೇರಿ ಐದು ಜನ ಆರೋಪಿಗಳ ಇಂದು ಸೆಷನ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ದರ್ಶನ್, ಪವಿತ್ರಗೌಡ, ವಿನಯ್ ಸೇರಿ ಐದು ಜನ ಆರೋಪಿಗಳ ಇಂದು ಸೆಷನ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ‌ ವಿಚಾರಣೆ ನಡೆಯಲಿದ್ದು, ದರ್ಶನ್ ಪರ ಸುನೀಲ್, ಪವಿತ್ರಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಲಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕರು ಶುಕ್ರವಾರವೇ ದರ್ಶನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರು.

ದರ್ಶನ್ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದರು. ಹೀಗಾಗಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು.ಅದರಂತೆ ಇಂದು ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಐವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.ವಿಶೇಷ ಸಾರ್ವಜನಿಕ ಅಭಿಯೋಜಕರ ಮನವಿಯಂತೆ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿದೆ.

Ad
Ad
Nk Channel Final 21 09 2023