ಬೆಂಗಳೂರು: ಮಂಗಳೂರಿನ ಕಿಮ್ಸ್ನಲ್ಲಿ ಎಂಡಿ ಎಮರ್ಜೆನ್ಸಿ ಮೆಡಿಸಿನ್ ಓದುತ್ತಿರುವ ಡಾ: ಅಫೀಫಾ ಹಕೀಂ ಅವರು ಇತ್ತೀಚೆಗೆ ಮೇಲೆಷಿಯಾದ ಕೌಲಲಾಂಪೂರನಲ್ಲಿ ಜರುಗಿದ ಏಷ್ಯಾ ಯುಥ್ ಮಾಡೆಲ್ ಯುನೈಟೆಡ್ ನೇಷನ್ , ಡಬ್ಲುಹೆಚ್ಓ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಗೊಂಡಿದ್ದರು. ಭಾರತವನ್ನು ಪ್ರತಿನಿಧಿಸುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಆಧುನಿಕ ಯುಗದಲ್ಲಿ ವೈದ್ಯಕೀಯ ಸವಾಲುಗಳ ಕುರಿತು ಪ್ರಬಂಧ ಮಂಡಿಸಿದ್ದಾರೆ. ಸದರಿ ಅಂತರಾಷ್ಟ್ರಿಯ ವೇದಿಕೆಯಲ್ಲಿ ಜರುಗಿದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಪರಂಪರೆಯ ಸಂಕೇತವಾದ ಭರತನಾಟ್ಯವನ್ನು ಪ್ರದರ್ಶಿಸುವ ಮೂಲಕ ಎರಡನೇ ಸ್ಥಾನ ಪಡೆದು ಭಾರತಕ್ಕೆ ಗೌರವ ತರುವ ಜೊತೆಗೆ ಕರ್ನಾಟಕದ ಹೆಮ್ಮೆ ಪುತ್ರಿಯಾಗಿ ಹೊರಹೊಮ್ಮಿದ್ದಾರೆ.
Ad