ಬೆಂಗಳೂರು: ನನ್ನ ಮೇಲಿನ ಆರೋಪ ನಿರಾಧಾರ ಎಂದು ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪವನ್ನು ಬಿಜೆಪಿ ಶಾಸಕ ಮುನಿರತ್ನ ಅಲ್ಲಗಳೆದಿದ್ದಾರೆ.
ಪ್ರಕರಣ ಸಂಬಂಧ ವೀಡಿಯೋ ಮೂಲಕ ಮಾತನಾಡಿರುವ ಮುನಿರತ್ನ, ಲೋಕಸಭೆ ನಂತರ ನನ್ನ ವಿರುದ್ಧ ಬಹಳಷ್ಟು ಸಂಚು ನಡೆದಿದೆ. ನಿನ್ನೆ ದೂರು ಕೊಟ್ಟ ವ್ಯಕ್ತಿ ಏಳೆಂಟು ವರ್ಷಗಳಿಂದ ನಮ್ಮ ಬಳಿ ಕೆಲಸ ಮಾಡ್ತಿದ್ದ. ಈ ಗುತ್ತಿಗೆದಾರನಿಗೆ ಈ ಏಳೆಂಟು ವರ್ಷಗಳಲ್ಲಿ ತೊಂದರೆ ಕೊಟ್ಟಿಲ್ಲ, ಈಗ ತೊಂದರೆ ಕೊಡ್ತೀನಾ ಎಂದು ಪ್ರಶ್ನಿಸಿದ್ದಾರೆ.
ದೇವರಾಜು ಅರಸು ಟ್ರಕ್ ಟರ್ಮಿನಲ್‌ನಲ್ಲಿ ಪ್ರತಿ ತಿಂಗಳು 15 ಲಕ್ಷ ಅವ್ಯವಹಾರ ಆಗ್ತಿದೆ ಅಂತಾ ನನಗೆ ದೂರು ಬಂತು. ನಾನು ಇದರ ತನಿಖೆ ಮಾಡಿ ಅಂತಾ ಪತ್ರ ಬರೆದೆ, ಆವತ್ತಿನಿಂದ ಇದು ಪ್ರಾರಂಭವಾಯ್ತು. ಯಾವುದಾದರೊಂದು ರೀತಿಯಲ್ಲಿ ನನಗೆ ತೊಂದರೆ ಕೊಡಬೇಕು ಅಂತಾ ಸಂಚು ನಡೆದಿದೆ. 15 ಲಕ್ಷ ಪಡ್ಕೊಳ್ತಿರೋ ವ್ಯಕ್ತಿ ಬೇರೆಯವನು ಅಂತಾ ನನಗೆ ಮಾಹಿತಿ ಬಂತು. ಇದರ ಮೇಲೆ ತನಿಖೆ ಮಾಡಲು ಹೇಳಿದ್ದೀನಿ. ಇಷ್ಟಕ್ಕೇ ನನ್ನ ಧ್ವನಿ ಮಾಡಿ ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.