ಬೆಂಗಳೂರು; ನ್ಯೂ ಇಯರ್ ಪಾರ್ಟಿಗಾಗಿ ಡ್ರಗ್ಸ್ ಸಾಗಿಸಲು ಮುಂದಾಗಿದ್ದ ಆಫ್ರಿಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿದೆ. ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ.
ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಎಂಬ ಆರೋಪಿ ನ್ಯೂ ಇಯರ್ ಪಾರ್ಟಿಗಾಗಿ ಡ್ರಗ್ಸ್ ತಂದಿದ್ದ.
ಆರೋಪಿಯು ಬೆಡ್ಶೀಟ್ ಕವರ್, ಸೋಪ್ ಬಾಕ್ಸ್ ಹಾಗೂ ಚಾಕೊಲೇಟ್ ಬಾಕ್ಸ್ನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಹೊಸ ವರ್ಷಕ್ಕೆ ರೇವ್ ಪಾರ್ಟಿಗೆ ಡ್ರಗ್ಸ್ ಸಾಗಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.