ಬೆಂಗಳೂರು: ಸಾಲು ಸಾಲು ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ. ತನ್ನ ಮುಂದಿನ ಪ್ರಾಜೆಕ್ಟ್ ಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರೊಂದಿಗೆ ಶಿವಣ್ಣ ಅವರ 131ನೇ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಈಗಾಗಲೇ ಸೆಟ್ಟೇರಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ.
ನಟ ಯಶ್ ಶಿವರಾಜ್ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಕೈ ಕುಲುಕಿಕೊಂಡು ಕಾಣಿಸಿರುವ ಲುಕ್ ಫ್ಯಾನ್ಸ್ ವಲಯದಲ್ಲಿ ವೈರಲ್ ಆಗಿದೆ. ಶಿವಣ್ಣ ಉದ್ದ ಕೂದಲು ಬಿಟ್ಟು ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಯಶ್ ಗಡ್ಡ ಬಿಟ್ಟು ಸ್ಮಾರ್ಟ್ ಆಗಿ ಕಾಣಿಸಿದ್ದಾರೆ.
.@NimmaShivanna x @TheNameIsYash
Rocking Star Yash met Shivanna at #Shivanna131 set today 💥#Shivanna #YashBoss #ToxicTheMovie pic.twitter.com/6sxDJZMaMH
— Bhargavi (@IamHCB) August 19, 2024