ಬೆಂಗಳೂರು: ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದರೂ ನನಗೆ ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಟ ಚೇತನ್ ಅಹಿಂಸಾ ಕಿಡಿಕಾರಿದ್ದಾರೆ.
ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯ ಅಂತಹವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಲ್ಲಿ ಪ್ರತಿಕ್ರಿಯಿಸಿರುವ ಅವರು, 52 ಕೋಟಿ ಆಸ್ತಿ ಘೋಷಿಸಿದ್ದರೂ, ಸ್ವಂತ ಮನೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿನ ಅವರ ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯನಂತವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ. ನಮ ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ನ್ಯಾಯದ ಪರಿಕಲ್ಪನೆ ಇಲ್ಲ, ಎಸ್ಸಿಎಸ್ಪಿ, ಟಿ.ಎಸ್.ಪಿ. ಯೋಜನೆಯ ಮೀಸಲು ಹಣವನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಕುಂಠಿತವಾಗಿದೆ.
ಈ ಅಸಮಾನತೆಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಮನುವಾದಿ, ಅಸಮಾನತಾವಾದಿ, ಶ್ರೀಮಂತರ ಪರವಾಗಿರುವ ಪಕ್ಷವಾಗಿದೆ. ಈ ಪಕ್ಷದಲ್ಲಿ ಬೆಳೆದಿರುವ ಸಚಿವ ಎಚ್.ಸಿ.ಮಹದೇವಪ್ಪ ಸೇರಿ ಹಲವರು, ದಲಿತರು, ಆದಿವಾಸಿಗಳಿಗೆ ಉದ್ದೇಶಪೂರ್ವಕವಾಗಿಯೇ ದೋಹ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಸ್ಸಿಎಸ್ಸಿ, ಟಿಎಸ್ಪಿ ಅನುದಾನ ಇರುವುದು ಗುಡಿಸಿನಲ್ಲಿರುವವರಿಗೆ ಮನೆ, ಶಿಕ್ಷಣ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ. ಆದರೆ ಕಳೆದ ವರ್ಷ 12,500 ಕೋಟಿ, ಈ ವರ್ಷ 14,500 ಸಾವಿರ ಕೋಟಿ ದಲಿತರು, ಆದಿವಾಸಿಗಳ ಹಣ ಕಿತ್ತುಕೊಂಡು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ, ಸಿಎಂಗೆ ನ್ಯಾಯದ ಪರಿಕಲ್ಪನೆ ಗೊತ್ತೇ ಇಲ್ಲ. ಪರಿವರ್ತನೆ ಮನಸ್ಥಿತಿ ಇಲ್ಲ ಎಂದು ಆಕೋಶ ಹೊರಹಾಕಿದ್ದಾರೆ.