ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್, ಪವಿತ್ರಾ ಸೇರಿ ನಾಲ್ವರ ಬೇಲ್ ಅರ್ಜಿ ವಿಚಾರಣೆ ಇಂದು ಸೆಷನ್ ಕೋರ್ಟ್ನಲ್ಲಿ ನಡೆಯಲಿದೆ.
ಆರೋಗ್ಯ ಕಾರಣ ಹೇಳಿ ದರ್ಶನ್ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ ಇದೆ ಎನ್ನಲಾಗಿದೆ. ಯಾಕೆಂದರೆ ನಟ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಬೆನ್ನಿನಲ್ಲಿ ತೀವ್ರ ಊತ ಹಿನ್ನಲೆ, ವೈದ್ಯರು ಸ್ಕ್ಯಾನಿಂಗ್ಗೆ ಸಲಹೆ ನೀಡಿದ್ದಾರೆ.
ವಿಮ್ಸ್ ವೈದ್ಯರು ಈಗಾಗ್ಲೇ ಆರೋಗ್ಯ ತಪಾಸಣೆ ಮಾಡಿದ್ದಾರೆ. ಆದರೆ ದರ್ಶನ್ ವೈದ್ಯರ ಕೆಲ ಸಲಹೆಯನ್ನ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಪೇನ್‌ಕ್ಯೂಲರ್ ಟ್ಯಾಬ್ಲೆಟ್ ಮಾತ್ರ ಸಾಕು. 10 ದಿನ ಪೇನ್‌ಕ್ಯೂಲರ್ ಮಾತ್ರೆ ನೀಡಿ ಎಂದು ದರ್ಶನ್ ಹೇಳಿದ್ದಾರಂತೆ. ಅದಕ್ಕೆ ಬೆನ್ನು ಊತ ಜಾಸ್ತಿಯಾದ್ರೆ ತೊಂದ್ರೆ ಎಂದು ಎಚ್ಚರಿಕೆ ನೀಡಿದ್ದಾರೆ. ಅ
ದಕ್ಕೆ ನಾಲ್ಕೈದು ದಿನಗಳಲ್ಲಿ ಬೆಂಗಳೂರಿಗೆ ಹೋಗ್ತೀನಿ ಎಂದು ದರ್ಶನ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿಗೆ ಹೋಗಿ ಸರ್ಜರಿ ಮಾಡಿಸುವೆ ಎಂದು ದರ್ಶನ್ ಹೇಳಿದ್ದಾರಂತೆ. ಹೀಗಾಗಿ ಬೇಲ್ ಮತ್ತು ಆರೋಗ್ಯದ ನೆಪದಲ್ಲಿ ದರ್ಶನ್ ಬೆಂಗಳೂರಿಗೆ ಹೋಗ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.