Bengaluru 23°C
Ad

ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆಗೆ ನುಗ್ಗಿದ ಯುವಕ ಪೊಲೀಸ್ ವಶಕ್ಕೆ

Cm (2)

ಬೆಂಗಳೂರು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭದ್ರತಾ ನಿಯಮ ಉಲ್ಲಂಘನೆಯಾದ ಪ್ರಸಂಗ ನಡೆದಿದೆ. ವೇದಿಕೆ ಮೇಲೆ ಜಂಪ್​ ಮಾಡಿ ಸಿಎಂ ಹತ್ತಿರ ಬರಲು ಯತ್ನಿಸಿದ ಯುವಕನನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ವಶಕ್ಕೆ ಪಡೆದಿದ್ದಾರೆ.

ವಿಧಾನಸೌಧದ ಮುಂಭಾಗ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್​.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಗಣ್ಯರು ಆಸೀನರಾಗಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವಕನೋರ್ವ ಏಕಾಏಕಿ ಜಂಪ್ ಮಾಡಿ ವೇದಿಕೆ ಮೇಲೆ ಬಂದಿದ್ದ. ಇದನ್ನು ನೋಡಿದ ಭದ್ರತಾ ಸಿಬ್ಬಂದಿ ತಕ್ಷಣವೇ ಯುವಕನನ್ನು ವಶಕ್ಕೆ ಪಡೆದರು.

ಯುವಕ ಕನ್ನಡ ಬಾವುಟದ ಶಾಲು ಧರಿಸಿ, ಕೈನಲ್ಲಿ ಶಾಲು ಹಿಡಿದಿರುವುದು ಕಂಡುಬಂದಿದೆ. ಇನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯುತ್ತಿದ್ದಂತೆ ಯುವಕ ತನ್ನ ಕೈಯಲ್ಲಿನ ಶಾಲನ್ನು ಸಿಎಂನತ್ತ ಎಸೆದಿದ್ದಾರೆ. ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Ad
Ad
Nk Channel Final 21 09 2023