Bengaluru 24°C
Ad

ಬೆಂಗಳೂರಿನ ಹೆಬ್ಬಗೋಡಿಯ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ!

ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಎರಡು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.

ಬೆಂಗಳೂರು: ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಎರಡು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.

ಬೆಂಗಳೂರು-ಹೊಸೂರು ರಾಜ್ಯ ಹೆದ್ದಾರಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಎಸ್ಕೆಎಫ್ ತಿರುವಿನ ಏರಿಯನ್ ಟೆಕ್ನಾಲಜಿ ಯೂನಿಟ್-1ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಧಾವಿಸಿದ್ದು, ಕಾರ್ಖಾನೆಯಲ್ಲಿನ ಕಾರ್ಮಿಕರನ್ನ ಸುರಕ್ಷಿತವಾಗಿ ಹೊರ ಹೋಗಲು ಅನುವು ಮಾಡುತ್ತಿದ್ದಾರೆ.

ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಈ ಕ್ಷಣ ಸುರಕ್ಷತೆಯ ಹಿತದೃಷ್ಟಿಯಿಂದ ಜನರನ್ನ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇನ್ನು ಕಾರ್ಖಾನೆಯ ಮೇಲೆಯೂ ಬೆಂಕಿಯ ಕೆನ್ನಾಲಿಗೆ ಕಾಣಿಸುತ್ತಿದ್ದು, ತೀವ್ರತೆ ಹೆಚ್ಚಾಗಿದೆ. ಸಂಜೆಯಿಂದಲೇ ಕಾರ್ಖಾನೆ ಬೆಂಕಿಯ ರುದ್ರನರ್ತನಕ್ಕೆ ಸಿಲುಕಿ ಬಹುಪಾಲು ಸುಟ್ಟಿದ್ದು, ಹೊಗೆಯ ದಟ್ಟಣೆ ಆಗಸಕ್ಕೆ ಮುಟ್ಟಿದೆ.

Ad
Ad
Nk Channel Final 21 09 2023