Bengaluru 30°C

ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು, 2 ಲಕ್ಷ ದಂಡ : ಸರ್ಕಾರ ಅಧಿಸೂಚನೆ

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024ಕ್ಕೆ  ರಾಜ್ಯಪಾಲರು ಅಂಕಿತ ಹಾಕಿದ್ದು, ಕಾಯ್ದೆ ಜಾರಿ ಸಂಬಂಧಿಸಿ ಇದೀಗ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು: ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024ಕ್ಕೆ  ರಾಜ್ಯಪಾಲರು ಅಂಕಿತ ಹಾಕಿದ್ದು, ಕಾಯ್ದೆ ಜಾರಿ ಸಂಬಂಧಿಸಿ ಇದೀಗ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.


ಮಳೆಗಾಲದ ಅಧಿವೇಶನದಲ್ಲಿ ಜುಲೈ 25ರಂದು ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024ಕ್ಕೆ ವಿಧಾನಪರಿಷತ್‌ನಲ್ಲಿ ಅಂಗೀಕಾರ ಸಿಕ್ಕಿತ್ತು. ಇದೀಗ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.


ಈ ಕಾಯ್ದೆ ಪ್ರಕಾರ ಉದ್ದೇಶಪೂರ್ವಕವಾಗಿ ವೈದರ ಮೇಲೆ ಹಲ್ಲೆ, ನಿಂದನೆ, ಅವಮಾನಿಸುವುದನ್ನು ನಿಷೇಧಿಸಲಾಗಿದೆ. ವೈದ್ಯರ ಮೇಲಿನ ಹಲ್ಲೆಗೆ 3 ವರ್ಷದಿಂದ 7 ವರ್ಷದ ತನಕ ಜೈಲು ಶಿಕ್ಷೆ ಹಾಗೂ 25 ಸಾವಿರದಿಂದ 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಇನ್ನು ನಕಲಿ ವೈದ್ಯರ ಮೇಲಿನ ದಂಡ 10 ಸಾವಿರದಿಂದ 1 ಲಕ್ಷದವರೆಗೆ ಏರಿಕೆ ಮಾಡಲಾಗಿದೆ.


ಇನ್ನು ವೈದ್ಯಕೀಯ ಪರಿಷತ್‌ನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಹೊರತುಪಡಿಸಿ ಇತರೆ ಸದಸ್ಯರು, ನಾಮನಿರ್ದೇಶಿತರ ಅವಧಿಯನ್ನು 5 ವರ್ಷಕ್ಕೆ ನಿಗದಿಪಡಿಸಲಾಗಿದೆ. ಎರಡು ಅವಧಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಿದ್ದವರು ಮತ್ತೆ ಅದೇ ಸ್ಥಾನಕ್ಕೆ ಚುನಾಯಿತರಾಗಲು ಅವಕಾಶವಿರುವುದಿಲ್ಲ. ಪರಿಷತ್‌ಗೆ 3 ವರ್ಷಗಳ ಅವಧಿಗೆ ಒಬ್ಬ ರಿಜಿಸ್ಟ್ರಾರ್‌ ಮತ್ತು ಉಪ ರಿಜಿಸ್ಟ್ರಾರ್‌ ನೇಮಕ ಮಾಡಲಾಗುತ್ತದೆ.


ಈ ಕಾಯ್ದೆ ಪ್ರಕಾರ ವೈದ್ಯರು ವೃತ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ, ವೈದ್ಯಕೀಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಒಂದು ವೇಳೆ ನೋಂದಣಿಯಾಗದೆ ವೃತ್ತಿ ಅಭ್ಯಾಸ ಮಾಡುತ್ತಿದ್ದರೆ, ಅಂತಹವರ ವಿರುದ್ಧ ಪರಿಷತ್‌ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರಿಷತ್ತಿನಲ್ಲಿ ನೋಂದಣಿಯಾಗದವರು ವೈದ್ಯ ವೃತ್ತಿ ನಿರ್ವಹಿಸುವಂತಿಲ್ಲ. ನಕಲಿ ವೈದ್ಯರ ವಿರುದ್ಧ ಪರಿಷತ್‌ ಸ್ವಯಂಪ್ರೇರಣೆಯಿಂದ ದೂರು ಸಲ್ಲಿಸಬಹುದಾಗಿದೆ.


 

Nk Channel Final 21 09 2023