Bengaluru 20°C
Ad

ಪವಿತ್ರಾ ಗೌಡ ಫೋನ್‌ನಲ್ಲಿ ರೇಣುಕಾಸ್ವಾಮಿ ಹತ್ಯೆಯ 65 ಫೋಟೋ ಲಭ್ಯ!

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದರಂತೆ ಸ್ಫೋಟಕ ವಿಷಯಗಳು ಬಹಿರಂಗಗೊಳ್ಳುತ್ತಿವೆ. ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಮೊಬೈಲ್‌ನಲ್ಲಿದ್ದ ಮಾಹಿತಿಗಳನ್ನು ಪೊಲೀಸರು ತೆಗೆಯಿಸಿದ ವೇಳೆ ಕೊಲೆಗೆ ಸಂಬಂಧಿಸಿದ ಸಂಭಾಷಣೆಗಳು, ಫೋಟೊಗಳು, ಸಂದೇಶ ಗಳ ಸಹಿತ ಹಲವು ಸಂಗತಿಗಳು ಪತ್ತೆಯಾಗಿವೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದರಂತೆ ಸ್ಫೋಟಕ ವಿಷಯಗಳು ಬಹಿರಂಗಗೊಳ್ಳುತ್ತಿವೆ. ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಮೊಬೈಲ್‌ನಲ್ಲಿದ್ದ ಮಾಹಿತಿಗಳನ್ನು ಪೊಲೀಸರು ತೆಗೆಯಿಸಿದ ವೇಳೆ ಕೊಲೆಗೆ ಸಂಬಂಧಿಸಿದ ಸಂಭಾಷಣೆಗಳು, ಫೋಟೊಗಳು, ಸಂದೇಶ ಗಳ ಸಹಿತ ಹಲವು ಸಂಗತಿಗಳು ಪತ್ತೆಯಾಗಿವೆ.

ಕೊಲೆಯಾದ ಬೆನ್ನಲ್ಲೇ ಪವಿತ್ರಾಗೆ ಕರೆ ಮಾಡಿದ್ದ ನಟ ದರ್ಶನ್‌, “ಪೊಲೀಸರು ಬಂದು ಏನಾದರೂ ಕೇಳಿದರೆ ಏನೂ ಗೊತ್ತಿಲ್ಲ ಎಂದು ಹೇಳು, ಅದನ್ನು ಬಿಟ್ಟು ಬೇರೆ ಏನನ್ನೂ ಬಾಯಿಬಿಡಬೇಡ’ ಎಂದು ಕರೆ ಕಡಿತಗೊಳಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ಕೊಲೆಯ ಅನಂತರ ಇತರ ಆರೋಪಿಗಳೊಂದಿಗೆ ಮಾತುಕತೆ ನಡೆಸಿ ಪ್ರಕರಣದಲ್ಲಿ ತನ್ನ ಹಾಗೂ ಪವಿತ್ರಾ ಹೆಸರು ತಳುಕು ಹಾಕಿಕೊಳ್ಳದಂತೆ ದರ್ಶನ್‌ ನಡೆಸಿದ್ದ ತಂತ್ರವನ್ನು ಪೊಲೀಸ್‌ ತಂಡ ಪತ್ತೆಹಚ್ಚಿದೆ.

ಪವಿತ್ರಾ ಮೊಬೈಲ್‌ನಲ್ಲಿ ಕೊಲೆ ಪ್ರಕರಣ ಸಂಬಂಧ 65 ಫೋಟೋಗಳು, ಜತೆಗೆ 17 ಸ್ಕ್ರೀನ್‌ ಶಾಟ್‌, ರೇಣುಕಾಸ್ವಾಮಿ ಕಳುಹಿಸಿದ್ದ 20 ಅಶ್ಲೀಲ ಸಂದೇಶಗಳು ಪತ್ತೆಯಾಗಿವೆ. ಪವಿತ್ರಾ ಜತೆ ದರ್ಶನ್‌ ನಡೆಸಿದ್ದ ವಾಟ್ಸ್‌ಆ್ಯಪ್‌ ಚಾಟ್‌ ಕೂಡ ಪೊಲೀಸರ ಕೈ ಸೇರಿದೆ. ಪವಿತ್ರಾ ಬಳಸುತ್ತಿದ್ದ 3 ಮೊಬೈಲ್‌ಗ‌ಳ ಪೈಕಿ ಒಂದನ್ನು ರಿಟ್ರೀವ್‌ ಮಾಡಲಾಗಿದೆ. ಇನ್ನೊಂದು ಮೊಬೈಲನ್ನು ಆಕೆ ಫ್ಲ್ಯಾಶ್‌ ಮಾಡಿಸಿ ಅದರಲ್ಲಿದ್ದ ಕೆಲವು ಅಂಶಗಳನ್ನು ಅಳಿಸಿರುವುದು ಗೊತ್ತಾಗಿದೆ. ಹೀಗಾಗಿ ಇನ್ನೆರಡು ಮೊಬೈಲ್‌ಗ‌ಳನ್ನು ಹೊರ ರಾಜ್ಯದ ಎಫ್ಎಸ್‌ಎಲ್‌ಗೆ ಕಳುಹಿಸಿ ರಿಟ್ರೀವ್‌ ಮಾಡಿಸಲಾಗುತ್ತಿದೆ.

Ad
Ad
Nk Channel Final 21 09 2023