2023ಕ್ಕೆ 123 ಸೀಟ್ ಗಳ ಗುರಿ

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್‌ 123 ಸೀಟ್ ಗಳ ಗುರಿಯನ್ನಿಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಯನ್ನು ನಡೆಸುತ್ತಿದೆ.
ಜೆಡಿಎಸ್‌ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ನ ಭಯ ಶುರುವಾಗಿದೆ. ರಾಜ್ಯದಲ್ಲಿ 2023ಕ್ಕೆ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, 123 ಸ್ಥಾನ ಗೆಲ್ಲುವ ಗುರಿಯನ್ನಿಟ್ಟುಕೊಂಡಿದೆ. ಗುರಿ ಸಾಧನೆಯನ್ನು ಯಾವ ರೀತಿ ಮಾಡಲಾಗುತ್ತದೆ ಎಂಬುದನ್ನು ಮುಂದೆ ಕಾದು ನೋಡಿ ಎಂದು ತಿಳಿಸಿದರು.

ಹಾಲಿ ಶಾಸಕರನ್ನು ಹೊರತುಪಡಿಸಿ 100 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಕೋರ್‌ ಕಮಿಟಿ ಸಭೆ ನಡೆಸಿ ಚರ್ಚಿಸಲಾಗುವುದು. ಎರಡು ದಿನಗಳ ಕಾಲ ಕಾರ್ಯಾಗಾರ ನಡೆಸಿ 100 ಅಭ್ಯರ್ಥಿಗಳಿಗೆ ಒಂದು ತರಬೇತಿ ಕ್ಯಾಂಪ್‌ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬೆಳಗಾವಿ, ಹುಬ್ಬಳಿ-ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಗೆ ಚುನಾಣಾ ದಿನಾಂಕ ಪ್ರಕಟಿಸಲಾಗಿದೆ. ಕಲಬುರಗಿ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇವೆ. ಆ ಭಾಗದ ನಮ್ಮ ಶಾಸಕರಾದ ಬಂಡೆಪ್ಪ ಕಾಶೆಂಪೂರ, ನಾಡಗೌಡ ಅವರು ಚುನಾವಣೆಗಾಗಿ ಹೆಚ್ಚಿನ ಶ್ರಮ ವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಮೊದಲಿಂದಲೂ ಜೆಡಿಎಸ್‌  ಪ್ರಭಾಲ್ಯ ಇದೆ. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಕುರಿತು ಚರ್ಚಿಸಲಾಗಿದೆ. ಅಲ್ಲದೇ, ಮುಂದಿನ ದಿನದಲ್ಲಿ ಪಕ್ಷದ ಸಂಘಟನೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲಿಯೇ ಒಂದು ಕಾರ್ಯಾಗಾರ ಮಾಡಲಾಗುವುದು ಎಂದರು.
Raksha Deshpande

Recent Posts

ಪ್ರಜ್ವಲ್ ವಿದೇಶಕ್ಕೆ ಹೋಗಲು ಕ್ಲಿಯರೆನ್ಸ್ ಕೊಟ್ಟವರು ಯಾರು: ಸಲೀಂ ಅಹ್ಮದ್

ಅಶ್ಲೀಲ ವೀಡಿಯೋ ಪ್ರಕರಣ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿದ್ದು, ಅವರಿಗೆ ಕ್ಲಿಯರೆನ್ಸ್ ಕೊಟ್ಟವರು ಯಾರು ಎಂಬುದರ…

59 mins ago

ಸಿಎನ್ ಜಿ ಇಂಧನ ನಿರಂತರ ಪೂರೈಕೆಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಯಶ್ ಪಾಲ್ ಸುವರ್ಣ ಮನವಿ

ಉಡುಪಿ ಜಿಲ್ಲೆಯಾದ್ಯಂತ ಸಿ ಎನ್ ಜಿ ಬಂಕ್ ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ…

1 hour ago

ಲಕ್ಷ್ಮೀ ಹೆಬ್ಬಾಳಕರ್ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದ ನೇಹಾ ಹಿರೇಮಠ ತಂದೆ-ತಾಯಿ

ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ…

1 hour ago

ಪ್ರಜ್ವಲ್ ಪ್ರಕರಣ ಕಾಂಗ್ರೆಸ್ ನಿಂದ ರಾಜಕೀಯ: ಅರವಿಂದ ಲಿಂಬಾವಳಿ ಆರೋಪ

ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

2 hours ago

ಬಿಸಿಲಿನ ತಾಪದಿಂದ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಸಾವು

ಬಿಸಿಲಿನ ತಾಪದಿಂದ ಹೊಲದ ಕೆಲಸಕ್ಕೆ ತೆರಳಿದ್ದ ರೈತರೊಬ್ಬರು ಸಾವಿಗೀಡಾದ ಘಟನೆ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

2 hours ago

ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಲಿ: ಮೊಯ್ಲಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಬೇಕು ಎಂಬ…

2 hours ago