News Karnataka Kannada
Tuesday, April 16 2024
Cricket
ಬೆಂಗಳೂರು

 2ನೇ ತರಗತಿಯವರೆಗಿನ ಮಕ್ಕಳಿಗೆ ಹೋಂವರ್ಕ್ ಕೊಡುವಂತಿಲ್ಲ : ಬಿ ಸಿ ನಾಗೇಶ್

Untitled 1
Photo Credit :

ಬೆಂಗಳೂರು: ಪುಟ್ಟ ಪುಟ್ಟ ಮಕ್ಕಳು ಬೆನ್ನಮೇಲೆ ಬ್ಯಾಗು ಹಾಕೊಂಡು ಶಾಲೆ ಕಡೆ ಬೆಳಗ್ಗೆ ಮುಖ ಮಾಡಿದ್ರೆ, ವಾಪಸ್ ಬರೋದು ಮಧ್ಯಾಹ್ನ ಇಲ್ಲ ಸಂಜೆ. ತನ್ನ ಅರ್ಧ ದಿನವನ್ನ ಶಾಲೆಯಲ್ಲಿ ಕಳೆದುಕೊಂಡು ಬರೋ ಮಕ್ಕಳು ಉಳಿದ ಸ್ವಲ್ಪ ಸಮಯದಲ್ಲಿ ಕೂಡ ಮನೆಯವರ ಜೊತೆ ಕಳೆಯೋದಕ್ಕೆ ಆಗಲ್ಲ ಅಷ್ಟೊಂದು ತಲೆ ಭಾರವಾದಂತ ಹೋಂ ವರ್ಕ್​ಗಳ ರಾಶಿಯನ್ನು ಶಾಲೆಗಳು ಕೊಡುತ್ತಿವೆ.

ಪೋಷಕರು ಕೂಡ ನೈತಿಕ ಶಿಕ್ಷಣ ಹೇಳಿಕೊಡುವ ಬದಲು ಮಕ್ಕಳ ಜೊತೆ ಕೂತು ಹೋಂ ವರ್ಕ್ ಹೇಳಿ ಕೊಡೋದೇ ದೊಡ್ಡ ಕೆಲಸವಾಗಿಬಿಡುತ್ತೆ. ಹೀಗಾಗಿ ಚಿಕ್ಕ ಮಕ್ಕಳಿಗೆ ಆದಷ್ಟು ಹೋಂ ವರ್ಕ್ ಪದ್ದತಿಯನ್ನ ತೆರವುಮಾಡಬೇಕೆಂದು ಪೋಷಕರು, ಸೇರಿ ಮಕ್ಕಳ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಕೂಡ ಮಕ್ಕಳ ಮನಸ್ಥಿತಿ ತಕ್ಕಹಾಗೆ ಚಿಂತಿಸಿದೆ.

ಈ ಹೋಂ ವರ್ಕ್ ವಿಚಾರದ ಬಗ್ಗೆ ಶಿಕ್ಷಣ ಇಲಾಖೆ ಕೂಡ ದಿಟ್ಟ ನಿರ್ಣಯ ಕೈಗೊಂಡಿದ್ದು ಇನ್ಮುಂದೆ ‘ಎರಡನೇ ತರಗತಿ’ಯವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂಬ ಬಗ್ಗೆ ಆಲೋಚಿಸಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಈಗಾಗಲೇ ನಲಿ-ಕಲಿ ರೀತಿ ಶಿಕ್ಷಣ ಒದಗಿಸಲು ಚಿಂತನೆ ನಡೆಸಿದೆ. ಈ ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆ ಮಕ್ಕಳಿಗೆ ನಲಿ-ಕಲಿ ಪದ್ದತಿಯನ್ನು ಜಾರಿ ಮಾಡಲು ಅಂತಿಮವಾದ ಅದೇಶಕ್ಕಾಗಿ ಶಿಕ್ಷಣ ಇಲಾಖೆ ಕಾಯುತ್ತಿದೆ.

ರಾಜ್ಯದಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಯಾವುದೇ ರೀತಿಯಾದಂತಹ ಹೋಂ ವರ್ಕ್​ಗಳನ್ನು ನೀಡುವಂತಿಲ್ಲ ಎಂಬ ಉಲ್ಲೇಖವಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ.

ಆದ್ರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಹೇರಬಾರದು. ಅನ್ನೋ ಕಾರಣಕ್ಕೆ ಖಾಸಗಿ ಶಾಲೆಯಲ್ಲಿ ಕೂಡ ಹೋಂ ವರ್ಷ ನಿಷೇಧದ ಬಗ್ಗೆ ಶಿಕ್ಷಣ ಇಲಾಖೆ ಒಲವು ತೋರಿದೆ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಸಹ ಸ್ಪಷ್ಟಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು