Ad

ಇಂದು ರಾಜ್ಯದಲ್ಲಿ 159 ಮಂದಿಯಲ್ಲಿ ಡೆಂಗ್ಯೂ ಪ್ರಕರಣ ಪತ್ತೆ

ಇಂದು ರಾಜ್ಯದಲ್ಲಿ  159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಿಂದ ಈವರೆಗೂ ಡೆಂಗ್ಯೂನಿಂದ 6 ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು: ಇಂದು ರಾಜ್ಯದಲ್ಲಿ  159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಿಂದ ಈವರೆಗೂ ಡೆಂಗ್ಯೂನಿಂದ 6 ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Ad
300x250 2

ಕಳೆದ 24 ಗಂಟೆಯಲ್ಲಿ 954 ಮಂದಿಗೆ ಟೆಸ್ಟ್‌ ಮಾಡಲಾಗಿದ್ದು, ಈ ಪೈಕಿ 159 ಮಂದಿಯಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 80, ಚಿಕ್ಕಬಳ್ಳಾಪುರದಲ್ಲಿ 08, ತುಮಕೂರಿನಲ್ಲಿ 12, ದಾವಣಗೆರೆಯಲ್ಲಿ 10, ಗದಗದಲ್ಲಿ 5, ಯಾದಗಿರಿಯಲ್ಲಿ 2, ಬೀದರ್ ನಲ್ಲಿ 13, ಕೊಪ್ಪಳದಲ್ಲಿ 1, ಹಾಸನದಲ್ಲಿ 03, ಚಿಕ್ಕಮಗಳೂರಿನಲ್ಲಿ 25 ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ಗಂಟೆಗಳಲ್ಲಿ 1 ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ 301 ಸಕ್ರಿಯ ಪ್ರಕರಣಗಳ ಪೈಕಿ 35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad