Ad

ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

 ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದ ತಮ್ಮ ರಾಜ್ಯದ ಎಲ್ಲಾ ಆಟಗಾರರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ 1 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದ ತಮ್ಮ ರಾಜ್ಯದ ಎಲ್ಲಾ ಆಟಗಾರರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ 1 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಈ ಬಹುಮಾನವು ತಮ್ಮ ಕ್ರೀಡಾ ನೀತಿಯ ಒಂದು ಭಾಗವಾಗಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. ಆಗಸ್ಟ್ 8 ರಂದು ಸ್ಪೇನ್ ತಂಡವನ್ನು 2-1 ರಿಂದ ಸೋಲಿಸಿದ ನಂತರ ಒಲಿಂಪಿಕ್ ಕಂಚಿನ ಪದಕ ಗೆದ್ದ ಆಟಗಾರರ ಖಾತೆಗೆ ಹಣ ಹೋಗಲಿದೆ. ಅಂದ ಹಾಗೆ ಹಾಕಿ ತಂಡದಲ್ಲಿ ನಾಯಕ ಹರ್ಮನ್​ಪ್ರೀತ್​ ಸಿಂಗ್ ಸೇರಿದಂತೆ 10 ಮಂದಿ ಪಂಜಾಬ್ ಆಟಗಾರರು ಇದ್ದಾರೆ.

 

 

Ad
Ad
Nk Channel Final 21 09 2023