ಶಾಲಾ ಮಕ್ಕಳಿಗೆ ಕೊರೋನಾ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲಾಗುತ್ತದೆ : ಸಚಿವ ಬಿ . ಸಿ . ನಾಗೇಶ್

ಬೆಂಗಳೂರು : ಕೊರೋನಾ ಸೋಂಕಿನ ( Corona Virus ) ಭೀತಿಯ ನಡುವೆಯೂ ರಾಜ್ಯದಲ್ಲಿ 6 ರಿಂದ 12 ನೇ ತರಗತಿ  ಆರಂಭಗೊಳಿಸಲಾಗಿದೆ . ಇದೀಗ ಅಕ್ಟೋಬರ್ 25 ರಿಂದ ಬಾಕಿ ಉಳಿದಂತ 1 ರಿಂದ 5 ನೇ ತರಗತಿಗಳನ್ನು  ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ನಡುವೆ ಶಾಲಾ ಮಕ್ಕಳಿಗೆ ಕೊರೋನಾ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವ ಬಿ . ಸಿ . ನಾಗೇಶ್  ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿನಾಗೇಶ್ ಅವರು, ರಾಜ್ಯದಲ್ಲಿ ಎಲ್ಲಾ ಶಾಲೆಗಳು ಆರಂಭಗೊಂಡ ನಂತ್ರ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೂಡ ಪುನರಾರಂಭಿಸಲಾಗುತ್ತದೆ. ಶಾಲೆ ಆರಂಭದ ವೇಳೆಗೆ ಮಕ್ಕಳಿಗೆ ಕೊರೋನಾ ಲಸಿಕೆ  ದೊರೆತರೇ, ಶಾಲೆಗಳಲ್ಲಿಯೇ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಈ ಮೂಲಕ ಶಾಲಾ ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ನೀಡಿದರು.

ಆಕ್ಟೋಬರ್‌ 25ರಿಂದ 1ರಿಂದ 5ರ ತನಕ ಶಾಲೆ ಶುರು ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಶಾಲೆ ಆರಂಭಕ್ಕೆ ಕೋವಿಡ್‌ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ 6 ನೇ ತರಗತಿಯಿಂದ ಉನ್ನತ ಶಿಕ್ಷಣ ಹಂತದವರೆಗಿನ ಎಲ್ಲ ತರಗತಿಗಳ ಭೌತಿಕ ಕ್ಲಾಸ್‌ ಅನುಮತಿ ನೀಡಿದೆ. ಕೊರೊನಾ ಮೂರನೇ ಅಲೆಯ ಭಯದ ಹಿನ್ನೆಲೆಯಿಂದ 1 ರಿಂದ 5 ನೇ ತರಗತಿ ಆರಂಭವಾಗಿರಲಿಲ್ಲ, ಇದಲ್ಲದೇ ಮಕ್ಕಳಿಗೆ ಕರೋನ ಸೊಂಕಿಗೆ ಲಸಿಕೆ ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಶಾಲೆಗಳನ್ನು ಪುನರ್‌ ಆರಂಭ ಮಾಡಲು ಮುಂದಾಗಿದೆ.

Gayathri SG

Recent Posts

ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು 3 ದಿನ ಯಾರು ಭೇಟಿ ಮಾಡುವಂತಿಲ್ಲ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…

13 mins ago

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

39 mins ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

53 mins ago

ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ: ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು…

1 hour ago

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

1 hour ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

2 hours ago