ಬೆಂಗಳೂರು : ಕೊರೋನಾ ಭೀತಿಯ ನಡುವೆಯೂ 6-10ನೇ ತರಗತಿವರೆಗೆ ಭೌತಿಕವಾಗಿ ತರಗತಿಗಳು ಆರಂಭವಾಗಿವೆ. ಇಲ್ಲಿಯವರೆಗೂ ಆನ್ಲೈನ್ ಕ್ಲಾಸ್ ಕೇಳುತ್ತಾ ಮನೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಮತ್ತೆ ಶಾಲೆ ವಾತಾವರಣ ಕೈಬೀಸಿ ಕರೆದಿದೆ.
ಈಗಷ್ಟೇ ತರಗತಿಗಳು ಆರಂಭವಾಗಿರುವ ಹಿನ್ನೆಲೆ ದಸರಾ ರಜೆ, ಬೇಸಿಗೆ ರಜೆ ಇದೆಯೋ ಇಲ್ಲವೋ ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿದ್ದರು. ಈ ಗೊಂದಲಕ್ಕೆ ತೆರೆ ಬಿದ್ದಿದ್ದು, ಅ.10ರಿಂದ 20 ರವರೆಗೆ ದಸರಾ ರಜೆ ಸಿಗಲಿದೆ. ಇದು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ, ಅನುದಾನರಹಿತ ಶಾಲೆಗಳಿಗೆ ಅನ್ವಯವಾಗಲಿದೆ. ಅಂತೆಯೇ 2022ರ ಮೇ. 1ರಿಂದ 28ರವರೆಗೆ ಬೇಸಿಗೆ ರಜೆ ಇರಲಿದೆ.