News Karnataka Kannada
Monday, April 29 2024
ಬೆಂಗಳೂರು

‘ವಿನೂತನ ಚಿಕಿತ್ಸಾ ಪದ್ದತಿಗಳನ್ನು ಆವಿಷ್ಕರಿಸಬೇಕು’: ಡಾ. ಸಿ.ಎನ್‌ ಅಶ್ವತ‍್ಥ ನಾರಾಯಣ  

Untitled 2
Photo Credit :

ಬೆಂಗಳೂರು: ಕರೋನಾ ಸಾಂಕ್ರಾಮಿಕ ರೋಗ ಸಮಾಜವನ್ನು ಕಾಡಿದ ನಂತರ ಗುಣಮಟ್ಟದ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದೆ. ಮಲ್ಯ ಆಸ್ಪತ್ರೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನವೀಕರಿಸಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ದಿಪಡಿಸಲಾಗಿದ್ದು, ನಗರದ ಹೃದಯ ಭಾಗದಲ್ಲಿ ಈ ಆಸ್ಪತ್ರೆ ತಲೆ ಎತ್ತಿರುವುದು ಬಹಳ ಸಂತಸದ ವಿಷಯ ಎಂದು ಉನ್ನತ ಶಿಕ್ಷಣ ಸಚಿವರ ಡಾ. ಸಿ. ಎನ್‌ ಅಶ್ವತ್ಥ ನಾರಾಯಣ ಹೇಳಿದರು.

ಮೂರು ದಶಕಗಳಿಂದ ಬೆಂಗಳೂರಿನ ಹೃದಯಭಾಗದಲ್ಲಿ ಹೆಲ್ತ್‌ಕೇರ್ ಹೆಗ್ಗುರುತಾಗಿರುವ ಮಲ್ಯ ಆಸ್ಪತ್ರೆಯು ತನ್ನೆಲ್ಲಾ ಪಂಚತಾರಾ ಸೇವೆಗಳನ್ನು ಇದೇ ಜೂನ್ 2 ರಿಂದ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (VSH) ಯು ಅದರ ನಿರ್ವಹಣೆ ಹೊಣೆ ಹೊರುತ್ತಿದೆ. ಈ ಮೂಲಕ ವೈದೇಹಿ ಆಸ್ಪತ್ರೆಯು ಆರೋಗ್ಯಸೇವೆ ನೀಡುವ ತನ್ನ ಕಾರ್ಯವನ್ನು ವಿಸ್ತರಿಸಿಕೊಂಡಿದೆ. ವೈದೇಹಿ ಆಸ್ಪತ್ರೆಯು ಈಗ ವೈದೇಹಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‘ ಆಗಿ ಪುನರ್ಜನ ಪಡೆದುಕೊಳ್ಳುತ್ತಿದೆ. ದಿವಂಗತ ಡಾ ಡಿ.ಕೆ. ಆದಿಕೇಶವುಲು ಅವರ ಮಾರ್ಗದರ್ಶನದಲ್ಲಿ ಹಾಗೂ ಅವರ ಮೌಲ್ಯಗಳ ಆಧಾರದ ಮೇಲೆ ಡಾಲ್ವಕೋಟ್ ಈ ಆಸ್ಪತ್ರೆಯನ್ನು ನಿರ್ವಹಿಸಲಿದೆ.

ಆಸ್ಪತ್ರೆಯನ್ನು ಉದ್ಘಾಟಿಸಿ ಸಚಿವರ ಡಾ. ಸಿ.ಎನ್‌ ಅಶ್ವತ್ಥ ನಾರಾಯಣ ಮಾತನಾಡಿ, ಕರೋನಾ ಸಾಂಕ್ರಾಮಿಕ ರೋಗ ಸಮಾಜವನ್ನು ಕಾಡಿದ ನಂತರ ಗುಣಮಟ್ಟದ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು ನಗರದ ಜನರಿಗೆ ಇಂತಹ ಆಸ್ಪತ್ರೆಗಳ ಅಗತ್ಯ ಇನ್ನೂ ಹೆಚ್ಚು. ನಗರದ ಹೃದಯ ಭಾಗದಲ್ಲಿ ಈ ಆಸ್ಪತ್ರೆ ಪ್ರಾರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳ ಮತ್ತು ಇನ್ನಿತರ ಸೇವೆಗಳು ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು ಎನ್ನುವುದು ಪ್ರತಿಯೊಬ್ಬರ ನಿರೀಕ್ಷೆ. ವೈದೇಹಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಇದು ಸಾಕಾರಗೊಳ್ಳಬೇಕು. ಜೊತೆಯಲ್ಲೇ, ಸಂಶೋಧನೆಗೆ ಒತ್ತು ನೀಡುವ ಮೂಲಕ ವಿನೂತನ ಚಿಕಿತ್ಸಾ ಪದ್ದತಿಗಳನ್ನು ವೈದ್ಯಕೀಯ ಸಮುದಾಯ ಆವಿಷ್ಕರಿಸಬೇಕು ಎಂದು ಕರೆ ನೀಡಿದರು.

ಕರೋನಾದಂತಹ ಪಿಡುಗು ಬರುತ್ತದೆ ಎಂದು ಯಾರಿಗೂ ನಿರೀಕ್ಷೆ ಇರಲಿಲ್ಲ. ಆದರೆ, ಇದು ಜಗತ್ತನ್ನೇ ಅಲ್ಲೋಲ-ಕಲ್ಲೋಕಗೊಳಿಸಿತು. ಇದರ ಜೊತೆಯಲ್ಲೇ ಆಧುನಿಕ ಜೀವನ ಶೈಲಿಕ ಸಂಕೀರ್ಣತೆ ಮತ್ತು ಅದು ಸೃಷ್ಟಿಸುತ್ತಿರುವ ಆತಂಕ ಹಾಗೂ ಒತ್ತಡಗಳಿಂದಾಗಿ ಹಲವು ಕಾಯಿಲೆಗಳು ಕಾಡುತ್ತಿವೆ. ಇಂತಹ ಕಾಯಿಲೆಗಳ ನಿವಾರಣೆಗೆ ವೈದ್ಯರು ಶ್ರಮಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಾ ಆರೋಗ್ಯ ವಲಯಕ್ಕೆ ಸಾಕಷ್ಟು ಮಹತ್ವ ಕೊಟ್ಟಿವೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಕೂಡಾ ಸಾಮಾಜಿಕ ಕಳಕಳಿಯೊಂದಿಗೆ ಕೈಜೋಡಿಸಿ ಜನಸಮುದಾಯಗಳ ಸಬಲೀಕರಣಕ್ಕೆ ಇಂಬು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ, ಪ್ರೇಮಾ ಕೃಷ್ಣ, ಮಂಗಳೂರಿನ ಯನೋಪೋಯಾ ವೈದ್ಯಕೀಯ ಕಾಲೇಜಿನ ಡಾ. ಅಬ್ದುಲ್‌ ಕುನಿ, ವೈದೇಹಿ ಆಸ್ಪತ್ರೆಗಳ ಸಮೂಹದ ಪದ್ಮಜಾ, ಡಾ. ಮಹೇಶ್‌ ಕೊಟ್ಪಲ್ಲಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಆಸ್ಪತ್ರೆಯ ಬಗ್ಗೆ:

ಮಲ್ಯ ಆಸ್ಪತ್ರೆಯಿಂದ ಒದಗಿಸಲಾದ ಸೂಪರ್‌ ಫೌಂಡೇಷನ್‌ನನ್ನು ನಿರ್ಮಿಸಿರುವ ವೈದೇಹಿ ಆಸ್ಪತ್ರೆಯು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. ಸುಧಾರಿತ ತಂತ್ರಜ್ಞಾನಉನ್ನತ ದರ್ಜೆಯ ಮೂಲಸೌಕರ್ಯ ಒದಗಿಸುವುದುಹೆಸರಾಂತ ವೈದ್ಯ ತಜ್ಞರ ತಂಡವನ್ನು ಪರಿಚಯಿಸುವುದು ಸೇರಿದಂತೆ ಹಲವು ಹೊಸ ಬದಲಾವಣೆ ಮಾಡಲು ಸನ್ನದ್ಧವಾಗಿದೆ.

ವೈದೇಹಿ ಆಸ್ಪತ್ರೆಯು ಹಿಂದಿನಿಂದಲೂ ಉತ್ತಮ ಆರೋಗ್ಯ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಈಗ ಇದರ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಅಪಘಾತ ನಡೆದ ಸಂದರ್ಭದಲ್ಲಿ ಗೋಲ್ಡನ್‌ ಅವರ್‌ನಲ್ಲಿ ಅಪಘಾತಗೊಂಡ ವ್ಯಕ್ತಿ ಸೂಕ್ತಚಿಕಿತ್ಸೆ ನೀಡಿದರೆ ಬದುಕುವ ಸಾಧ್ಯತೆ ಹೆಚ್ಚು. ಈ ವೇಳೆಯಲ್ಲಿ ಒಂದು ನಿಮಿಷ ಕೂಡ ಹೆಚ್ಚು ಮುಖ್ಯವಾಗುತ್ತದೆ. ನಮ್ಮ ವೈದೇಹಿ ಆಸ್ಪತ್ರೆಯ ವೈದ್ಯರು ಇಂಥ ಟ್ರಾಮ ಪ್ರಕರಣಗಳನ್ನು ಅತ್ಯಂತ ಜಾಗರೂಕರಾಗಿ ನಿಭಾಹಿಸಿದ್ದಾರೆ. ವೈದೇಹಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯು ದೇಶಾದ್ಯಂತ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬರಿಗೂ ವಿಶೇಷ ಕಾಳಜಿ ವಹಿಸಿ ಸೇವೆ ಸಲ್ಲಿಸಲು ಬದ್ಧವಾಗಿದೆ. ಅದರಲ್ಲೂ ತುರ್ತು ಆರೈಕೆಗೆ ಆದ್ಯತೆ ನೀಡುವುದರಿಂದ ಹಿಡಿದು ಒಂದೇ ಸೂರಿನಡಿ 30+ ಸೂಪರ್-ಸ್ಪೆಷಾಲಿಟಿಗಳೊಂದಿಗೆ ವೈದ್ಯಕೀಯ ತುರ್ತು ಪ್ರಕರಣಗಳನ್ನು ನಿಭಾಯಿಸಲು ಸಿದ್ಧವಿದೆ.

ಅಷ್ಟೆಅಲ್ಲದೆಕ್ರಿಟಿಕಲ್-ಕೇರ್ ಸೇವೆಗಳ ಸ್ಪೆಕ್ಟ್ರಮ್ ತುರ್ತು ಔಷಧಿ ಮತ್ತು ಆಘಾತ ಆರೈಕೆಇಂಟರ್ವೆನ್ಷನಲ್ ಕಾರ್ಡಿಯಾಲಜಿ / ಟಿಎವಿಆರ್ಅತ್ಯಾಧುನಿಕ ಹೃದಯ ಶಸ್ತ್ರಚಿಕಿತ್ಸೆಗಳುಪಾರ್ಶ್ವವಾಯು ನಿರ್ವಹಣೆಹೈಪರ್‌ಬೇರಿಕ್ ಚೇಂಬರ್‌ನೊಂದಿಗೆ ಸುಧಾರಿತ ಗಾಯದ ಆರೈಕೆಸೌಂದರ್ಯಶಾಸ್ತ್ರಆರ್ಥೊಡಾಂಟಿಕ್ಸ್ಜೆನೆಟಿಕ್ ಪ್ರೊಫೈಲಿಂಗ್,ಸುಧಾರಿತ ಐಸಿಯುಗಳು ಮತ್ತು ಇನ್ನೂ ಹೆಚ್ಚಿನ ಸೇವೆಯನ್ನು ನೀಡುತ್ತಿದೆ ಎಂದು ಆಸ್ಪತ್ರೆ ನಿರ್ವಹಣಾ ತಂಡ ಹೇಳುತ್ತದೆ.

ಮಲ್ಯ ಆಸ್ಪತ್ರೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕವೂ ವೈದೇಹಿ ಆಸ್ಪತ್ರೆಯು ತನ್ನ ನಾಮಕರಣವನ್ನು ವೈದೇಹಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿಯೇ ಮುಂದುವರೆಸಲಿದ್ದು, ‘V’ ಅಕ್ಷರದಿಂದ ಸಂಸ್ಥೆ ಪ್ರೇರಿತವಾಗಿದೆ ಎಂದು ವಿವರಿಸಿದೆ. ಈ ‘V’ ಆಕಾರವು ಗಡಿಯಾರದ ಮುಳ್ಳುಗಳಂತೆ ವಿನ್ಯಾಸಗೊಳಿಸಲಾಗಿದೆ. ಯಾವುದೇ ತುರ್ತುಸ್ಥಿತಿ ಮತ್ತು ಆಘಾತಕ್ಕೆ ಸನ್ನದ್ಧತೆಯ ಭಾವವನ್ನು ಬಲವಾಗಿ ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಮಳೆಬಿಲ್ಲು ಕ್ರಿಟಿಕಲ್-ಕೇರ್ ಸೇವೆಗಳು ಮತ್ತು ಒದಗಿಸಿದ ವಿಶೇಷತೆಗಳ ವರ್ಣಪಟಲಕ್ಕೆ ಒಂದು ರೂಪಕವಾಗಿದೆ.

ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಅಸ್ಕರ್ ISO 9001:2008 ಪ್ರಮಾಣೀಕರಣವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವ ಸ್ಪರ್ಶದೊಂದಿಗೆ ಗುಣಮಟ್ಟದ ರೋಗಿಗಳ ಆರೈಕೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ರಕ್ಷಣೆ ನೀಡವುದು ಮತ್ತು ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು