ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು, ಹುದ್ದೆ ಹಾಕುವಂತಿಲ್ಲ: ರಾಜ್ಯ ಸರಕಾರ

ಬೆಂಗಳೂರು: ಇನ್ನು ಮುಂದೆ ತಮ್ಮ ತಮ್ಮ ವಾಹನದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಎಂದೆಲ್ಲ ನಾಮಫಲಕ ಹಾಕುವುದನ್ನು ತಡೆಯಲು ಸರ್ಕಾರ ಮುಂದಾಗಿದೆ.

ಕಾರಿನ ನಂಬರ್‌ಪ್ಲೇಟ್ ಮೇಲೆ ಅಧ್ಯಕ್ಷ, ಕಾರ್ಯದರ್ಶಿ, ಸಂಘಟನೆ ಹೆಸರು, ಸ್ಟಾರ್ ನಟರ ಹೆಸರು ಹಾಕಿದ್ದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಿಂದಲೇ ಆದೇಶ ಹೊರಡಿಸಲಾಗಿದೆ.

ಇದೇ ತಿಂಗಳ ಮೇ 24ರೊಳಗೆ ಎಲ್ಲಾ ನಾಮಫಲಕ ತೆರವು ಮಾಡಿ ವಾಹನವನ್ನು ರಸ್ತೆಗಿಳಿಸಬೇಕು. ನಿಯಮದ ಪ್ರಕಾರ, ವಾಹನದ ನಂಬರ್‌ಪ್ಲೇಟ್ ಮೇಲೆ ಯಾವುದೇ ಹೆಸರು, ಹುದ್ದೆಯನ್ನು ಹಾಕುವಂತಿಲ್ಲ.ಆದೇಶ ಪಾಲನೆಯ ಗಡುವಿನ ಬಳಿಕ ನಾಮಫಲಕ ತೆರವುಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ‌ ಹೊರಡಿಸಿದ್ದಾರೆ.ಯಾವುದೇ ಖಾಸಗಿ ವಾಹನಗಳ ಮಾಲೀಕರುಗಳು ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು ಹೇಳಲಾಗಿದೆ.‌

ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಹಕ್ಕುಗಳ ಆಯೋಗ/ ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತಹ ರಾಷ್ಟ್ರೀಯ ರಾಜ್ಯ ಮಾನವ ಹಕ್ಕುಗಳ ಒಕ್ಕೂಟ/ ಸಂಸ್ಥೆ ಇತ್ಯಾದಿ ಹೆಸರುಗಳನ್ನು, ಚಿಕ್ಕ ಲಾಂಛನಗಳನ್ನು ಹಾಗೂ ಸಂಘ-ಸಂಸ್ಥೆಗಳ ಹೆಸರು ಅಳವಡಿಸಿಕೊಂಡಿರುವುದನ್ನು ತೆರವುಗೊಳಿಸಲು ಸೂಚಿಸಿ ಆದೇಶಿಸಲಾಗಿದೆ.

Ashika S

Recent Posts

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

6 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

22 mins ago

ಭಾರೀ ಗಾಳಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ ಮನೆಯ ಗೇಟ್ ಕಿತ್ತು ಬಂದಿದ್ದು, ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7…

25 mins ago

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್…

48 mins ago

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

1 hour ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

1 hour ago