ಬೆಂಗಳೂರು: ವಾಟ್ಸ್ ಆ್ಯಪ್ ಸಂದೇಶಗಳ ಮೂಲಕ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಮರುಪೂರಣ ಹಾಗೂ ಕಾಯ್ದಿರಿಸುವ ಅವಕಾಶವನ್ನು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ನೀಡಿದೆ.
‘ಹಲೋ’ ಸಂದೇಶವನ್ನು 1800224344 ಸಂಖ್ಯೆಗೆ ಕಳಿಸಿ, ಈ ಸೇವೆಯನ್ನು ಪಡೆಯಬಹುದು. ಹೆಚ್ಚುವರಿ ಸಿಲಿಂಡರ್, ಹೊಸ ಸಂಪರ್ಕ, ವಿಳಾಸ ಬದಲಾವಣೆ, ವಿತರಕರ ಕುರಿತ ಮಾಹಿತಿ ಮತ್ತು ಸಿಲಿಂಡರ್ ದರಗಳ ಮಾಹಿತಿಯನ್ನೂ
ವಾಟ್ಸ್ ಆ್ಯಪ್ ಸಂದೇಶದ ಮೂಲಕ ಪಡೆಯಬಹುದು ಎಂದು ಸಂಸ್ಥೆ ಮಾಹಿತಿ ನೀಡಿದೆ.