ವನ್ಯಜೀವಿ ಉತ್ಪನ್ನ ಮರಳಿಸಲು ಕಾಲಾವಕಾಶ ಕೊಡುವ ಚಿಂತನೆ: ಸಚಿವ ಖಂಡ್ರೆ

ಬೆಂಗಳೂರು: ನಟರು ಸೇರಿದಂತೆ ಗಣ್ಯರು ಹುಲಿ ಉಗುರಿನ ನಕಲಿ ಲಾಕೆಟ್‌ ಧರಿಸಿದರೂ ಅವರ ಅಭಿಮಾನಿಗಳು ಅದನ್ನೇ ಫಾಲೋ ಮಾಡುತ್ತಾರೆ. ಈ ನಿಟ್ಟಿನಲ್ಲಿ ಗಣ್ಯರು, ನಟರು ನಕಲಿ ಪೆಂಡೆಂಡ್‌ಗಳನ್ನು ಕೂಡ ಧರಿಸಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಲಿ ಉಗುರು ಸೇರಿದಂತೆ ವನ್ಯ ಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅಂತಹ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದರು.

ವನ್ಯಜೀವಿ ಉತ್ಪನ್ನದಿಂದ ಮಾಡಿದ  ಉತ್ಪನ್ನಗಳಿಗೆ ಮಾಲೀಕತ್ವ ಹಕ್ಕು ಪಡೆಯಲು 2003ರವರೆಗೆ ಕಾಲಾವಕಾಶ ನೀಡಲಾಗಿತ್ತು. ಕೆಲವರು ಈ ನಿಟ್ಟಿನಲ್ಲಿ ಹಕ್ಕು ಪಡೆದಿದ್ದಾರೆ. ಕೆಲವರು ದೃಢೀಕರಣ, ಪ್ರಮಾಣ ಪತ್ರ ಪಡೆದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವನ್ಯಜೀವಿ ಉತ್ಪನ್ನ ಮರಳಿಸಲು ಕಾಲಾವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಅದೇ ರೀತಿ ಚಿನ್ನಾಭರಣ ಮಳಿಗೆಗಳಲ್ಲಿ ನಮ್ಮಲ್ಲಿ ವನ್ಯಜೀವಿಯ ಯಾವುದೇ ಆಭರಣ ತಯಾರಿಸುವುದಿಲ್ಲ, ಮಾರಾಟ ಮಾಡುವುದಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂಬ ಫಲಕ ಹಾಕುವಂತೆ ಸೂಚಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

Ramya Bolantoor

Recent Posts

ಕೋಲ್ಕತ್ತಾ-ಗುಜರಾತ್‌ ಪಂದ್ಯ ರದ್ದು : ಟೂರ್ನಿಯಿಂದ ಹೊರಬಿದ್ದ​ ಟೈಟಾನ್ಸ್​ ಪಡೆ

: ಕೆಕೆಆರ್​ ವಿರುದ್ಧದ ಸೋಮವಾರದ ಐಪಿಎಲ್​ ಪಂದ್ಯ ರದ್ದು ಗೊಂಡ ಕಾರಣ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್​ ತಂಡ…

2 mins ago

ಕೋವಿಡ್ ಹೊಸ ರೂಪಾಂತರಿ ಪತ್ತೆ : 91 ಪ್ರಕರಣ ದಾಖಲು

ಈಗಾಗಲೇ ಒಂದು ಬಾರಿ ಜನ ಜೀವನವನ್ನು ಅಲ್ಲೋಲಾ ಕಲ್ಲೊಲಾ ಮಾಡಿದ್ದ ಕೊರೊನಾ ಮಾರಿ ಇದೀಗ ಮತ್ತೆ ಒಂದು ಹೊಸ ರೂಪದಲ್ಲಿ…

36 mins ago

ಇಂದು ಮಧ್ಯಾಹ್ನ ರೇವಣ್ಣ ರಿಲೀಸ್ : ಜೈಲಿನ ಬಳಿ ಬೆಂಬಲಿಗರ ಸಂಭ್ರಮ

ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಇಂದು…

50 mins ago

ಕೇರಳದಲ್ಲಿ ಎರಡು ಕಡೆ ಐಸ್‌ಕ್ರೀಂ ಬಾಂಬ್‌ ಸ್ಫೋಟ

ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಗೆ ಎಸೆಯಲಾದ 2 ಐಸ್‌ ಕ್ರೀಂ ಬಾಂಬ್‌ಗಳು…

1 hour ago

ಮುಂಬೈನಲ್ಲಿ ದಿಢೀರ್‌ ದೂಳಿನ ಬಿರುಗಾಳಿ: 8 ಸಾವು, 65 ಜನರಿಗೆ ಗಾಯ

ಮುಂಬೈನಲ್ಲಿ ಸಂಜೆ ದಿಢೀರನೆ ಬಿರುಗಾಳಿ ಕಾಣಿಸಿಕೊಂಡಿದ್ದು ಪರಿಣಾಮ 8 ಮಂದಿ ಸಾವನಪ್ಪಿದ್ದಾರೆ. ಜೊತೆಗೆ 65 ಜನರು ಗಾಯಗೊಂಡಿದ್ದಾರೆ. ಗಾಳಿಯ ಬೆನ್ನಲ್ಲೇ…

1 hour ago

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಬಿಹಾರದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ (72) ಅವರು ನಿಧನ ಹೊಂದಿದ್ದಾರೆ. ದೆಹಲಿಯ ಅಖಿಲ…

2 hours ago