ರೆಸಾರ್ಟ್ ನಲ್ಲಿ ಇಂದು ಜೆಡಿಎಸ್ ಶಾಸಕಾಂಗ ಸಭೆ

 ಬೆಂಗಳೂರು: ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಂಚರತ್ನ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಜೆಡಿಎಸ್‍ ಇಂದು ಸಂಜೆ ಶಾಸಕಾಂಗ ಸಭೆ ಕರೆದಿದೆ.

ದೇವನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್​​ನಲ್ಲಿಂದು ಸಂಜೆ 6 ಗಂಟೆಗೆ ಸಭೆ ಕರೆಯಲಾಗಿದ್ದು, ಶಾಸಕರು, ಮಾಜಿ ಶಾಸಕರು, ಚುನಾವಣಾ ಆಕಾಂಕ್ಷಿಗಳನ್ನು ಆಹ್ವಾನಿಸಲಾಗಿದೆ.

ಜೆಡಿಎಸ್‍ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಸಭೆಯಲ್ಲಿ ದೇವೇಗೌಡರ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ.

ವಿಧಾನಸಭೆಯಲ್ಲಿ 32 ಜೆಡಿಎಸ್ ಶಾಸಕರಿದ್ದು, ವಿಧಾನಪರಿಷತ್​ನ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಆದರೆ ರಾಜ್ಯಸಭೆಯ ಒಂದು ಸ್ಥಾನ ಗೆಲ್ಲಲು ಕಾಂಗ್ರೆಸ್ ಅಥವಾ ಬಿಜೆಪಿಯ ನೆರವು ಪಡೆಯಬೇಕಾಗುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪಕ್ಷದ ಅಭ್ಯರ್ಥಿ ಆಯ್ಕೆಗೆ ಯಾವ ಕಾರ್ಯತಂತ್ರ ಅನುಸರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಮತ್ತೆ ರಾಜ್ಯಸಭೆ ಚುನಾವಣಾ ಕಣಕ್ಕಿಳಿಸುವ ಉದ್ದೇಶವನ್ನು ಪಕ್ಷ ಹೊಂದಿದೆ.

ಮೇಲ್ಮನೆ ಸ್ಥಾನಕ್ಕೆ ಹಾಲಿ ಇಬ್ಬರು ಪರಿಷತ್ ಸದಸ್ಯರು ಸೇರಿದಂತೆ ಹಲವರ ಹೆಸರು ಪ್ರಸ್ತಾಪವಾಗುತ್ತಿದೆ. ಆದರೆ ಇದುವರೆಗೂ ಅಭ್ಯರ್ಥಿ ಆಯ್ಕೆ ಕುರಿತಂತೆ ಯಾವುದೇ ಚರ್ಚೆ ಪಕ್ಷದ ವೇದಿಕೆಯಲ್ಲಿ ನಡೆದಿಲ್ಲ. ಸಭೆಯ ನಂತರ ಒಂದೆರಡು ದಿನಗಳಲ್ಲಿ ಕೋರ್‌ ಕಮಿಟಿ ಸಭೆ ನಡೆಸಿ ಚುನಾವಣೆಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ.

ಜೆಡಿಎಸ್ ಸೇರ್ಪಡೆಗೊಂಡು ರಾಜ್ಯಾಧ್ಯಕ್ಷರಾಗಿರುವ ಸಿ.ಎಂ.ಇಬ್ರಾಹಿಂ, ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ಈ ಹುದ್ದೆಗೆ ಬೇಡಿಕೆ ಇಟ್ಟಿರುವುದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಆದರೆ ಇಬ್ರಾಹಿಂ ಅವರ ಬೇಡಿಕೆಗೆ ಜೆಡಿಎಸ್ ವರಿಷ್ಠರು ಸಮ್ಮತಿಸುವುದು ಕಷ್ಟ. ಕಾರಣ, ಒಬ್ಬರಿಗೆ ಎರಡು ಹುದ್ದೆ ಕೊಡಲು ಆಗುವುದಿಲ್ಲ. ಮತ್ತೊಂದೆಡೆ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಹೊಸ ಮುಖಗಳಿಗೆ ಮಣೆ ಹಾಕಬೇಕೆಂಬ ದೃಷ್ಟಿಯಿಂದ ಎರಡನೇ ಬಾರಿಗೆ ಶರವಣ ಅವರನ್ನು ಆಯ್ಕೆ ಮಾಡಲು ಕುಮಾರಸ್ವಾಮಿ ಅವರಿಗೆ ಒಲವಿಲ್ಲ ಎಂಬ ಮಾತುಗಳು ಜೆಡಿಎಸ್‍ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಾರೆ, ಇಂದು ನಡೆಯುವ ಶಾಸಕಾಂಗ ಪಕ್ಷದ ಸಭೆ ಮಹತ್ವ ಪಡೆದುಕೊಂಡಿದೆ.

Ashika S

Recent Posts

ಮಂಜೂರಾದ ಜಮೀನು ಪಿಟಿಸಿಎಲ್ ಕಾಯಿದೆಯಡಿ ಮರು ಸ್ಥಾಪನೆ ಇಲ್ಲ

ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಭೂ ನ್ಯಾಯಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ…

5 mins ago

ಗೆಳಯನಿಗೆ ಸಾತ್‌ ನೀಡಲು ಹೋಗಿದ್ದ ಅಲ್ಲು ವಿರುದ್ಧ ಕೇಸ್ ದಾಖಲು

ಪುಷ್ಪಾ-2 ರಿಲೀಸ್​ ಕ್ರೇಜ್​ನಲ್ಲಿರೋ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್…

8 mins ago

ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ : ನಾಲ್ಕನೇ ಆರೋಪಿ ಅರೆಸ್ಟ್‌

ಕೆನಡಾದಲ್ಲಿ ಕಳೆದ ವರ್ಷ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದ, ಖಲಿಸ್ತಾನಿ ಪರ ಹೋರಾಟಗಾರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ನನ್ನು ಹತ್ಯೆ…

30 mins ago

ಆರು ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಬದರಿನಾಥ

ಉತ್ತರಾಕಾಂಡ ಚಮೋಲಿಯಲ್ಲಿರುವ ಬದರಿನಾಥ ಬಾಗಿಲನ್ನು ಇಂದು(ಬಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ…

46 mins ago

ಬಸವ ಭವನದ ಜಮೀನಿಗೆ ಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ

ನಗರದ ನಾವದಗೇರೆ ಸಮೀಪದ ಸರ್ವೇ ನಂ. 60ರಲ್ಲಿ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ…

1 hour ago

ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ : ಹಿರಿಯ ಶಿಕ್ಷಕಿ

ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ…

1 hour ago