News Karnataka Kannada
Monday, April 29 2024
ಬೆಂಗಳೂರು

ರಾಜ್ಯ ಸರ್ಕಾರವೂ ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ ನಿರ್ಧಾರ

Petrol Desiel
Photo Credit :

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಇಳಿಸಿದ ಬೆನ್ನಿಗೇ ರಾಜ್ಯ ಸರ್ಕಾರವೂ ಬೆಲೆ ಇಳಿಕೆ ನಿರ್ಧಾರ ಕೈಗೊಂಡಿದ್ದು, ಪೆಟ್ರೋಲ್​-ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ ಆಗಲಿದೆ.ಕೇಂದ್ರ ಸರ್ಕಾರ ಪೆಟ್ರೋಲ್​ ಮೇಲೆ 5 ರೂ.

ಹಾಗೂ ಡೀಸೆಲ್​ ಮೇಲೆ 10 ರೂ. ಅಬಕಾರಿ ಸುಂಕವನ್ನು ಇಳಿಸುವ ಕುರಿತ ನಿರ್ಧಾರವನ್ನು ಇಂದು ಪ್ರಕಟಿಸಿತ್ತು. ಮಾತ್ರವಲ್ಲದೆ ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿರುವುದಾಗಿ ಹೇಳಿದೆ.

ಇದಾದ ಕೆಲವೇ ನಿಮಿಷಗಳಲ್ಲಿ ಕರ್ನಾಟಕ ಸರ್ಕಾರ ಕೂಡ ಪೆಟ್ರೊಲ್​-ಡೀಸೆಲ್​ ಬೆಲೆ ಇಳಿಸಲಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್​ ಮೇಲೆ ತಲಾ 7 ರೂ. ಇಳಿಸಲಿರುವುದಾಗಿ ಅವರು ಹೇಳಿದ್ದಾರೆ.

ಹೊಸ ದರ ಇಂದು ಸಂಜೆಯಿಂದ ಜಾರಿಗೆ ಬರಲಿದ್ದು, ರಾಜ್ಯದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ ಅಂದಾಜು 95.50 ರೂ. ಹಾಗೂ ಡೀಸೆಲ್​ ಬೆಲೆ 81.50 ರೂ. ಆಗಲಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು 2,100 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು